ಪಾಕ್ ಗೆ ನೆರವು: ಅಮೆರಿಕ ಉಲ್ಟಾ

ಪಾಕಿಸ್ತಾನಕ್ಕೆ ಹೆಚ್ಚುವರಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದ ಅಮೆರಿಕ ಈಗ ಭಾರತದೊಂದಿಗೆ ಕಳ್ಳಾಟ ಆಡುತ್ತಿದೆ.
ಉಗ್ರ ಝಕಿವುರ್ ರೆಹಮಾನ್ ಲಖ್ವಿ (ಸಂಗ್ರಹ ಚಿತ್ರ)
ಉಗ್ರ ಝಕಿವುರ್ ರೆಹಮಾನ್ ಲಖ್ವಿ (ಸಂಗ್ರಹ ಚಿತ್ರ)
Updated on: 

ನ್ಯೂಯಾರ್ಕ್: ಸೋಮವಾರವಷ್ಟೇ ಪಾಕಿಸ್ತಾನಕ್ಕೆ ಹೆಚ್ಚುವರಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದ ಅಮೆರಿಕ ಈಗ ಭಾರತದೊಂದಿಗೆ ಕಳ್ಳಾಟ ಆಡುತ್ತಿದೆ.

ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಂಡಿರುವ ಬಗ್ಗೆ ನಾನು ಯಾವುದೇ ಪ್ರಮಾಣ ಪತ್ರ ನೀಡಿಲ್ಲ. ಕೆರ್ರಿ-ಲುಗಾರ್ ವಿಧೇಯಕದನ್ವಯ ಪಾಕ್ಗೆ ಹೆಚ್ಚುವರಿ ನೆರವು ನೀಡುವ ಪ್ರಸ್ತಾಪವನ್ನು ಕಾಂಗ್ರೆಸ್ಗೆ ಸಲ್ಲಿಸಿಯೇ ಇಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಮಂಗಳವಾರ ತಿಳಿಸಿದ್ದಾರೆ.

ಈ ಮೂಲಕ ಭಾರತದ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿದ್ದಾರೆ ಕೆರ್ರಿ. ಇದಕ್ಕೂ ಮೊದಲು ಅಂದರೆ 2013ರಲ್ಲಾದರೆ ಅಮೆರಿಕವು ಪಾಕ್ಗೆ ಹೆಚ್ಚಿನ ನೆರವು ನೀಡಲು ಮುಂದಾಗಿತ್ತು ಅಷ್ಟೇ ಎಂದೂ ಅವರು ಹೇಳಿದ್ದಾರೆ.

ಲಖ್ವಿಗೆ ಪಾಕ್ ಕೋರ್ಟ್ ಸಮನ್ಸ್

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಉಗ್ರ ಝಕಿವುರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪಾಕ್ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಲಖ್ವಿಗೆ ಸಮನ್ಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ವೇಳೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಲಖ್ವಿಗೆ ಜಾಮೀನು ನೀಡುವ ವೇಳೆ ಉಗ್ರ ನಿಗ್ರಹ ನ್ಯಾಯಾಲಯವು ಮುಂಬೈ ದಾಳಿಗೆ ಸಂಬಂಧಿಸಿ ಆತನ ವಿರುದ್ಧ ಇದ್ದ ಸಾಕ್ಷ್ಯಗಳನ್ನು ಪರಿಗಣಿಸಿಲ್ಲ ಎಂದು ಪಾಕ್ ಸರ್ಕಾರ ಅರ್ಜಿಯಲ್ಲಿ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com