ಕಳಪೆ ಬೌಲಿಂಗ್ ಹಿನ್ನಡೆಗೆ ಕಾರಣ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ...
ಕಳಪೆ ಬೌಲಿಂಗ್ ಹಿನ್ನಡೆಗೆ ಕಾರಣ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ ಸೋಲನುಭವಿಸಲು ಕಳಪೆ ಬೌಲಿಂಗ್ ಕಾರಣ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ನಾನು ರ್ಯಾಂಕಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನಾವು ಐದನೇ ಸ್ಥಾನ ಪಡೆಯುತ್ತೇವೊ ಅಥವಾ ಏಳನೇ ಸ್ಥಾನ ಪಡೆಯುತ್ತೇವೋ ಎಂಬುದು ಪ್ರಮುಖವಲ್ಲ. ಕಾರಣ ಭವಿಷ್ಯದಲ್ಲಿ ಭಾರತ ಸುದೀರ್ಘ ಅವಧಿಗಳ ಕಾಲ ವಿದೇಶದಲ್ಲಿ ಟೆಸ್ಟ್ ಆಡುವುದಿಲ್ಲ ಕ್ರಮೇಣ ಭಾರತ ರ್ಯಾಂಕಿಂಗ್‌ನಲ್ಲಿ ಬಡ್ತಿ ಪಡೆಯಲಿದೆ.

ಇಲ್ಲಿ ಪ್ರಮುಖವಾಗಿ ಕಾಡುತ್ತಿರುವುದು ಭಾರತದ ಬೌಲಿಂಗ್. ಕಳಪೆ ಬೌಲಿಂಗ್‌ನಿಂದ ತಂಡ ಹಿನ್ನಡೆ ಅನುಭವಿಸಬೇಕಾಯಿತು ಎಂದರು. ತಂಡದಲ್ಲಿ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡದಿದ್ದರೆ, ಅಥವಾ ವೇಗ ಅಥವಾ ಸ್ಪಿನ್ ವಿಭಾಗದಲ್ಲಿ ವಿಶ್ವಮಾನ್ಯ ಬೌಲರ್‌ಗಳು ಇಲ್ಲದಿದ್ದರೆ ಸಹಜವಾಗಿಯೇ ರ್ಯಾಂಕಿಂಗ್‌ನಲ್ಲಿ ಕುಸಿತ ಕಾಣುತ್ತೇವೆ. ಪರಿಣಾಮಕಾರಿ ಬೌಲಿಂಗ್ ಇಲ್ಲವಾದರೆ, ಜಯದ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಎಂದರು.

ನಾನು ರಣಜಿ ಪಂದ್ಯಾವಳಿಯನ್ನು ನೋಡುತ್ತೇನೆ. ದೇಶಿ ಕ್ರಿಕೆಟ್‌ನಲ್ಲೂ ಹೆಚ್ಚು ಪ್ರತಿಭಾವಂತ ಬೌಲಿಂಗ್ ಅಳಕಾಶಗಳಿಲ್ಲ. ಆದರೆ, ಮುಂದಿನ 6-8 ತಿಂಗಳಲ್ಲಿ ಪರಿಸ್ಥಿತಿ ಬದಲಾಗುವ ವಿಶ್ವಾಸವಿದೆ ಎಂದರು.

ಟೀಕೆಗಳು ನ್ಯಾಯಸಮ್ಮತ: ಆಸೀಸ್ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ರೀತಿಯಾದ ಟೀಕೆಗಳು ಸಹಜ ಹಾಗೂ ನ್ಯಾಯಸಮ್ಮತ ಎಂದು ಭಾರದ ಮಾಜಿ ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಭಾರತ, ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡಬಲ್ಲ ಉತ್ತಮ ಗುಣಮಟ್ಟದ ಬೌಲರ್‌ಗಳನ್ನು ಪಡೆಯಬೇಕು. ಅಲ್ಲದೆ ನಿರಂತರವಾಗಿ ಬೌಲರ್‌ಗಳ ಸಾಮರ್ಥ್ಯವನ್ನು ಪರಿಶೀಲಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಮೇಲಿನ ಟೀಕೆಗಳು ಸರಿಯಾಗಿದೆ. ನಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಆದರೆ, ಅವರಲ್ಲಿ ಯಾರು ಟೆಸ್ಟ್ ಮಾದರಿಗೆ ಹೊಂದಿಕೊಳ್ಳುತ್ತಾರೆ. ಹಾಗೂ ಎದುರಾಳಿ ತಂತಡದ ವಿಕೆಟ್ ಪಡೆಯಬಲ್ಲ ಬೌಲರ್ ಯಾರು ಎಂಬುದನ್ನು ಆಯ್ಕೆ ಮಾಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com