ದೆಹಲಿ ಚರ್ಚ್ ದಾಳಿ ಪ್ರಕರಣ: ಮೂವರು ಬಂಧನ

ಮೇರಿ ಮಾತೆಯ ಪುತ್ಥಳಿಯನ್ನು ಹಾನಿ ಮಾಡಿದ ಪ್ರಕರಣ...
ದೆಹಲಿ ಚರ್ಚ್ ದಾಳಿ ದುಷ್ಕರ್ಮಿಗಳ ಬಂಧನ
ದೆಹಲಿ ಚರ್ಚ್ ದಾಳಿ ದುಷ್ಕರ್ಮಿಗಳ ಬಂಧನ

ನವದೆಹಲಿ: ದೆಹಲಿಯ ಚರ್ಚ್‌ನಲ್ಲಿ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ, ಮೇರಿ ಮಾತೆಯ ಪುತ್ಥಳಿಯನ್ನು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನವದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ದೆಹಲಿಯ ವಿಕಾಸಪುರಿಯಲ್ಲಿನ ಅವರ್ ಲೇಡಿ ಆಫ್ ಗ್ರೇಸಸ್ ಚರ್ಚ್ ಮೇಲೆ ದುಷ್ಕರ್ಮಿಗಳ ಗುಂಪೊಂದು, ನೆನ್ನೆ ಬೆಳಿಗ್ಗೆ ದಾಳಿ ನಡೆಸಿತು. ಈ ವೇಳೆ ಚರ್ಚ್‌ನ ಕಿಟಕಿಗಾಜುಗಳನ್ನು ಪುಡಿಪುಡಿ ಮಾಡಿದರಲ್ಲದೆ, ಮೇರಿ ಮಾತೆಯ ಪುತ್ಥಳಿಯನ್ನು ಹಾನಿ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಜಾಲ ಬೀಸಿದರು. ಚರ್ಚ್‌ನಲ್ಲಿದ್ದ ಸಿಸಿಟಿವಿಯಲ್ಲಿ ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದ ದೃಶ್ಯಗಳು ಕ್ಯಾಮೆರಾನಲ್ಲಿ ಸೆರಯಾಗಿದ್ದವು. ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಖೆಡ್ಡಾಕೆ ಕೆಡವಲು ಕಾರ್ಯಾಚರಣೆ ಕೈಗೊಂಡಿದ್ದರು.

ಈ ಪ್ರಕರಣದ ಸಂಬಂಧ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವ್ಯಕ್ತಿಗಳ ಪೈಕಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಮತ್ತೊಬ್ಬ ಯುವಕ ಕಾಣಿಸಿಕೊಂಡಿದ್ದು, ಆತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಯೇ ಅಥವಾ ಚರ್ಚ್ ದಾಳಿಯನ್ನು ತಡೆಯಲು ಬಂಧಿದ್ದನೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com