ದೆಹಲಿಯಲ್ಲಿ ಭಾರಿ ಮಂಜು: 27 ರೈಲು ಸಂಚಾರ ವ್ಯತ್ಯಯ

ರಾಜಧಾನಿ ದೆಹಲಿಯಲ್ಲಿ ತೀವ್ರ ಚಳಿ ಹಾಗೂ ಮಂಜು ಮುಂದುವರಿದಿದ್ದು, ಶನಿವಾರ 27ಕ್ಕೂ ಹೆಚ್ಚು ರೈಲು...
ಚಳಿಗೆ ದೆಹಲಿ ಗಡಗಡ  ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಚಳಿಗೆ ದೆಹಲಿ ಗಡಗಡ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ತೀವ್ರ ಚಳಿ ಹಾಗೂ ಮಂಜು ಮುಂದುವರಿದಿದ್ದು, ಶನಿವಾರ 27ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ.

ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶ 19.8ರಷ್ಟಿದ್ದು, ಕನಿಷ್ಠ 11.4 ರಷ್ಟಿದೆ. ಇದರಿಂದಾಗಿ ರಾಜಧಾನಿಯಾದ್ಯಂತ ಮಂಜು ಕವಿದ ವಾತಾವರಣ ಮುಂದುವರಿದಿದ್ದು 27 ಕ್ಕೂ ಹೆಚ್ಚು ರೈಲು ಸಂಚಾರ ಅಸ್ತವ್ಯಸ್ತವಾಗಿದೆ. 200 ಮೀಟರ್‌ಗಿಂತ ದೂರವಿರುವ ಯಾವುದೇ ವಸ್ತುಗಳು ಕಾಣದಂತೆ ತೀವ್ರವಾಗಿ ಮಂಜು ಆವರಿಸಿದೆ.

ಹಳಿಗಳ ಮೇಲೆ ದಟ್ಟ ಮಂಜು ಆವರಿಸಿದ್ದು, ರೈಲುಸಂಚಾರದಲ್ಲಿ ವಿಳಂಬವಾಗಿವೆ. ಅಲ್ಲದೆ, ಉತ್ತರ ಭಾರತದ ರಾಜ್ಯಗಳಿಗೆ ಸಂಚಾರ ಕೈ ಗೊಂಡಿದ್ದ ಮೂರು ರೈಲುಗಳ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com