ಫೇಸ್ ಬುಕ್ ನಲ್ಲಿ ಶಿಕ್ಷಕಿ ತಲೆಗೂದಲಿನ ಬಗ್ಗೆ ಕಮೆಂಟ್: ವಿದ್ಯಾರ್ಥಿ ವಜಾ

ಟೀಚರ್ ತಲೆಗೂದಲಿನ ಬಗ್ಗೆ ಕಮೆಂಟ್ ಮಾಡಿದ ವಿದ್ಯಾರ್ಥಿಯನ್ನು ಶಾಲೆಯಿಂದಲೇ ವಜಾ ಮಾಡಿರುವ ಅಪರೂಪದ ಪ್ರಕರಣ ಲಂಡನ್‌ನಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಟೀಚರ್ ತಲೆಗೂದಲಿನ ಬಗ್ಗೆ ಕಮೆಂಟ್ ಮಾಡಿದ ವಿದ್ಯಾರ್ಥಿಯನ್ನು ಶಾಲೆಯಿಂದಲೇ  ವಜಾ ಮಾಡಿರುವ ಅಪರೂಪದ ಪ್ರಕರಣ ಲಂಡನ್‌ನಲ್ಲಿ ನಡೆದಿದೆ.

ಬ್ರಿಸ್ಟಲ್‌ನ ಹಾರ್ಟ್ ಕ್ಲಿಫ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹೆಸರು ಜೋರ್ಡಾನ್‌ಪೋರ್ಡ್ (14). ಈತ ಅದೇ ಶಾಲೆಯ ಶಿಕ್ಷಕಿ ಕೆಝಿಯಾ ಫೆದರ್‌ಸ್ಟೋನ್ ಎಂಬುವವರ ತಲೆಗೂದಲಿನ ಶೈಲಿ, ಬಣ್ಣದ ಬಗ್ಗೆ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ್ದಾನೆ.

ಈ ಪ್ರಕರಣ ಬಯಲಾಗಿದ್ದು ಅವನನ್ನು ಶಾಲೆಯಿಂದ ಹೊರ ಹಾಕಲಾಗಿದೆಯಂತೆ.

ಶಿಕ್ಷಕಿ ತನ್ನ  ತಲೆಗೂದಲಿಗೆ ಕೇಸರಿಬಣ್ಣ  ಡೈ ಮಾಡಿಕೊಂಡಿದ್ದಳಂತೆ. ವಾಸ್ತವವಾಗಿ ಶಾಲೆಯಲ್ಲಿ ಆ ಬಣ್ಣ ಸ್ವೀಕಾರ್ಹವಲ್ಲ. ಅಷ್ಟೇ ಅಲ್ಲ ಆ ಶಿಕ್ಷಕಿಗೆ ಅದು ಶೋಭಿಸುತ್ತಲೂ ಇರಲಿಲ್ಲವಂತೆ. ಇದರಿಂದಾಗಿ ಆ ಹುಡುಗ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿ ಈ ರೀತಿ ಕೂದಲಿಗೆ ಬಣ್ಣ ಬಳಿದುಕೊಳ್ಳುವುದು ಸರಿ ಕಾಣುವುದಿಲ್ಲ ಎಂದು ಹೇಳಿದ್ದಾನೆ.

ಇದು ಸಂದೇಶ ಶಿಕ್ಷಕಿ ಹಾಗೂ ಶಾಲೆಯವರು ಗಮನಕ್ಕೆ ಮಂದಿದ್ದು, ಬಾಲಕನನ್ನು ಹೊರ ಹಾಕಿದ್ದಾರಂತೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಬಾಲಕನ ಪೋಷಕರು, ಕೆಝಿಯಾ ಎಂಬ ಶಿಕ್ಷಕಿ ಬಾಲಕನಿಗೆ ಕಿರುಕುಳ ನೀಡುತ್ತಿದ್ದಳಂತೆ. ಆಕೆಯ ಕಿರುಕುಳ ಸಹಿಲಾರದ ಬಾಲಕ ಈ ರೀತಿ ಸಂದೇಶ ಕಳುಹಿಸಿ ತನ್ನ ಸಿಟ್ಟು ಹೊರ ಹಾಕಿದ್ದಾನೆ ಎಂದು ವಾದ ಮಾಡಿದ್ದಾರೆ. ಒಟ್ಟಾರೆ ವಿದ್ಯಾರ್ಥಿ ಫೇಸ್ ಬುಕ್ ಕಮೆಂಟ್ ವಜಾಕ್ಕೆ ಕಾರಣವಾಗಿರುವುದಂತು ಸತ್ಯ.  ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com