ಪಿಯು ಟಾಪರ್ ಗೆ ಅಖಿಲೇಶ್ ಯಾದವ್ ಜೊತೆ ಹೆಲಿಕಾಪ್ಟರ್ ಪ್ರಯಾಣದ ಯೋಗ

ಯುಪಿ ಬೋರ್ಡ್ ಟಾಪರ್ ಪ್ರಶಾಂತ್ ಸಾಮಾದೀಯಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸನ್ಮಾನ ಮಾಡಿ ಆತನೊಂದಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on: 

ಲಖನೌ: ಹೆಲಿಕಾಪ್ಟರ್ ನಲ್ಲಿ ಕುಳಿತು ಪ್ರಯಾಣಿಸಬೇಕೆಂದು ಯಾರಿಗೆ ಇಷ್ಟ ಇರಲ್ಲ ಹೇಳಿ? ಅತಿ ಹೆಚ್ಚು ಅಂಕ ಪಡೆದ ಉತ್ತರ ಪ್ರದೇಶದ ವಿದ್ಯಾರ್ಥಿಯೊಬ್ಬನಿಗೆ ಆ ಕನಸು ನನಸಾಗಿದೆ, ಅದೂ ತನ್ನದೇ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸುವ ಮೂಲಕ.

ಜಾನ್ಸಿ ಮೂಲದ ಪ್ರಶಾಂತ್ ಸಾಮಾದೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸನ್ಮಾನ ಮಾಡಿದರು, ಇದಾದ ಬಳಿಕ 10 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಆತನ ತಂಗಿ ನಿಶಾಗೂ ಅಖಿಲೇಶ್ ಯಾದವ್ ಲ್ಯಾಪ್ ಟಾಪ್ ನೀಡಲು ಝಾನ್ಸಿಗೆ ತೆರಳಬೇಕಿತ್ತು. ಈ ವೇಳೆಯೇ ಪ್ರಶಾಂತ್ ಗೆ ಸಿಎಂ ಅಖಿಲೇಶ್ ಯಾದವ್ ರೊಂದಿಗೆ ಹೆಲಿಕಾಫ್ಟರ್ ನಲ್ಲಿ ತೆರಳುವ ಅವಕಾಶ ಬಂದಿದ್ದು.

ಸನ್ಮಾನ ಕಾರ್ಯಕ್ರಮ ಮುಗಿದ ನಂತರ ಪ್ರಶಾಂತ್ ನೊಂದಿಗೆ ಮಾತನಾಡುತ್ತಿದ್ದ ಅಖಿಲೇಶ್ ಯಾದವ್, ಆತನ ಕುಟುಂಬದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ 10 ನೇ ತರಗತಿಯಲ್ಲಿ ಆತನ ತಂಗಿಯೂ ಉತ್ತಮ ಅಂಕ ಪಡೆದಿರುವುದು ತಿಳಿದು "ನಡಿ ನಾನು ನಿನ್ನನ್ನು ಹೆಲಿಕಾಫ್ಟರ್ ನಲ್ಲಿ ಕರೆದುಕೊಂಡು ಹೋಗುತ್ತೇನೆ" ಎಂದು ಹೇಳಿದ್ದಾರೆ. ಪ್ರಶಾಂತ್ ನ ಪೋಷಕರಿಗೆ ಈ ಬಗ್ಗೆ ಮಾಹಿತಿ ತಿಳಿಸಿ ವಿದ್ಯಾರ್ಥಿಯೊಂದಿಗೆ ಝಾನ್ಸಿಗೆ ಹೆಲಿಕಾಫ್ಟರ್ ನಲ್ಲಿ ತೆರಲಿದ್ದಾರೆ.  

ಮುಖ್ಯಮತ್ರಿಯೊಂದಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಪ್ರಶಾಂತ್, ಈ ಹಿಂದೆಂದೂ ಹೆಲಿಕಾಫ್ಟರ್ ನಲ್ಲಿ ಹೋಗಿರಲಿಲ್ಲ, ಪ್ರಯಾಣದ ವೇಳೆ ಗಂಗಾ ನದಿ ಸೇತುವೆ ಸೇರಿದಂತೆ ವಿವಿಧ ಪ್ರದೇಶಗಳನ್ನು ತೋರಿಸಿದ ಅಖಿಲೇಶ್ ಯಾದವ್, ಚೆನ್ನಾಗಿ ಓದುವಂತೆ ಹೇಳಿದರು,  ಉತ್ತಮ ಅಂಕಗಳನ್ನು ಪಡೆದ ಇತರ ಉತ್ತಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದರು ಎಂದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com