ಭಾರತಕ್ಕೆ ಬಂದ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: 'ಮಹಾ' ಸಿಎಂ

ವೀಸಾ ಸಮಸ್ಯೆಯಿಂದಾಗಿ ವಿಮಾನ ತಡವಾಯಿತೆಂಬ ಆರೋಪದ ಕುರಿತಂತೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್...
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
Updated on: 

ಮುಂಬೈ: ವೀಸಾ ಸಮಸ್ಯೆಯಿಂದಾಗಿ ವಿಮಾನ ತಡವಾಯಿತೆಂಬ ಆರೋಪದ ಕುರಿತಂತೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಭಾರತಕ್ಕೆ ಬಂದ ನಂತರ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅನಾಮಿಕ ವ್ಯಕ್ತಿಯೊಬ್ಬರಿಗೆ ಹೇಳಿದ್ದಾರೆ.

ಏರ್ ಇಂಡಿಯಾದ ಎಐ-191 ವಿಮಾನವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರಣದಿಂದಾಗಿ ತಡವಾಯಿತೆಂಬ ಆರೋಪದ ಕುರಿತಂತೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಫಡ್ವವೀಸ್ ಆವರು, ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿದ್ದು, ನಾನೊಬ್ಬ ಮುಖ್ಯಮಂತ್ರಿಯಾಗಿದ್ದು ನಿಯೋಗವಿಲ್ಲದೆಯೇ ವಿಮಾನದಲ್ಲಿ ಹೇಗೆ ಪ್ರಯಾಣಿಸಲು ಸಾಧ್ಯ. ವೀಸಾ ಪರೀಕ್ಷೆ ನಡೆಸಿದ ನಂತರ ವಿಮಾನ ಬರುತ್ತಿದ್ದಂತೆ ವಿಮಾನದಲ್ಲಿ ಕುಳಿತುಕೊಳ್ಳಲಾಯಿತು.

ವಿಮಾನ ಹಾರಾಟ ತಡವಾಗುತ್ತಿದ್ದರು ನನ್ನನ್ನು ಬೇರೆ ವಿಮಾನದಲ್ಲಿ ಕಳುಹಿಸಿಕೊಡುವಂತೆಯೂ ಯಾರನ್ನು ಕೇಳಲಿಲ್ಲ. ವಿಮಾನ ಹೊರಡುವುದನ್ನು ನೋಡುತ್ತಾ ಕಾದು ಕುಳಿತಿದ್ದೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಬೇಕಿದ್ದರೆ ಈ ಕುರಿತಂತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರನ್ನು ಪ್ರಶ್ನಿಸಬಹುದು. ಒಂದು ವೇಳೆ ವಿಮಾನ ಹಾರಾಟಕ್ಕೆ ನನ್ನಿಂದ ತೊಂದರೆ ಎದುರಾಗಿದ್ದರೆ ನನ್ನ ಪ್ರಯಾಣವನ್ನು ನಾನೇ ರದ್ದು ಮಾಡುತ್ತಿದ್ದೆ. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳೆಲ್ಲ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.


ಇದೇ ವೇಳೆ ಅನಾಮಿಕ ವ್ಯಕ್ತಿಯೊಬ್ಬನ ವಿರುದ್ಧ ಕಿಡಿಕಾರಿರುವ ಫಡ್ನವೀಸ್ ಅವರು, ಆಗಿದ್ದಾಯ್ತು ನಾನು ಭಾರತಕ್ಕೆ ಬಂದ ಮೇಲೆ ನಿನ್ನ ಮೇಲೆ ಮಾನನಷ್ಟ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇನೆಂದು ಹೇಳಿದ್ದಾರೆ. ಆದರೆ, ಕ್ರಿಮಿನಲ್ ಮೊಕದ್ದಮೆ ಹೂಡುವ ಆ ವ್ಯಕ್ತಿ ಯಾರೆಂಬುದನ್ನು ಫಡ್ನವೀಸ್ ಸ್ಪಷ್ಟಪಡಿಸಿಲ್ಲ.

ತಮ್ಮ ಮೇಲಿರುವ ಆರೋಪ ತಳ್ಳಿಹಾಕಿರುವ ಫಡ್ನವೀಸ್ ಅವರ ಪ್ರತಿಕ್ರಿಯೆಗೆ ಈಗಾಗಲೇ ಬೆಂಬಲ ವ್ಯಕ್ತಪಡಿಸಿರುವ ವಿಮಾನದಲ್ಲಿ ಸಹ ಪ್ರಯಾಣಿಕರಾಗಿದ್ದ ಇಬ್ಬರು ಪ್ರಯಾಣಿಕರು, ಫಡ್ನವೀಸ್ ವಿಮಾನದಲ್ಲಿ ನಾವು ಸಹ ಪ್ರಯಾಣಿಕರಾಗಿದ್ದೆವು. ವಿಮಾನ ಹಾರಾಟ ವಿಳಂಬದಲ್ಲಿ ಫಡ್ನವೀಸ್ ಅವರ ಪಾತ್ರವಿಲ್ಲ. ಅವರು ವಿಮಾನದಲ್ಲಿ ಕುಳಿತು ಫೈಲ್ ಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com