ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಾಲ್ಕು ವರ್ಷಗಳ ಹಿಂದೆ ಪರಾಗ್ ಸಾವಂತ್ ರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದ ಸಂದರ್ಭದ ಸಂಗ್ರಹ ಚಿತ್ರ
ದೇಶ
9 ವರ್ಷ ಕೋಮಾದಲ್ಲಿದ್ದ ವ್ಯಕ್ತಿಗೆ ಅಂತೂ ಸಿಕ್ತು ಮುಕ್ತಿ
2006ರ ಜುಲೈ 11ರಂದು ಮುಂಬೈಯ ಸ್ಠಳೀಯ ರೈಲಿನಲ್ಲಿ ಉಂಟಾಗಿದ್ದ ಸರಣಿ ಬಾಂಬ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾವಸ್ಥೆಯಲ್ಲಿದ್ದ ಪರಾಗ್ ಸಾವಂತ್ ನಿನ್ನೆ(ಮಂಗಳವಾರ) ಬೆಳಗ್ಗೆ ಇಲ್ಲಿನ ಹಿಂದುಜಾ ಆಸ್ಪತ್ರೆಯಲ್ಲಿ ನಿಧನರಾದರು...
ಮುಂಬೈ: 2006ರ ಜುಲೈ 11ರಂದು ಮುಂಬೈಯ ಸ್ಠಳೀಯ ರೈಲಿನಲ್ಲಿ ಉಂಟಾಗಿದ್ದ ಸರಣಿ ಬಾಂಬ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾವಸ್ಥೆಯಲ್ಲಿದ್ದ ಪರಾಗ್ ಸಾವಂತ್ ನಿನ್ನೆ(ಮಂಗಳವಾರ) ಬೆಳಗ್ಗೆ ಇಲ್ಲಿನ ಹಿಂದುಜಾ ಆಸ್ಪತ್ರೆಯಲ್ಲಿ ನಿಧನರಾದರು.
ಸಾವಂತ್ ಥಾಣೆ ಜಿಲ್ಲೆಯ ಬ್ಯಾಂದರ್ ಉಪನಗರದ ನಿವಾಸಿಯಾಗಿದ್ದು, ಅಂದು ತಮ್ಮ ಪತ್ನಿ ಜತೆ ವೀರಾ ರೈಲಿನ ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಾಂಬ್ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಸಾವಂತ್ ತಲೆಗೆ ತೀವ್ರವಾದ ಏಟು ಬಿದ್ದು ಕೋಮಾಕ್ಕೂ ಹೊರಟು ಹೋಗಿದ್ದರು.
ಸಾವಂತ್ ಅವರ ಪತ್ನಿ ಪ್ರೀತಿ ಸಾವಂತ್ ಆ ಸಮಯದಲ್ಲಿ ಗರ್ಭಿಣಿಯಾಗಿದ್ದರು. ಅವರಿಗೆ ನಂತರ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಲಾಯಿತು.
ಘಟನೆ ನಡೆದು ನಾಲ್ಕು ವರ್ಷಗಳ ನಂತರ ಸಾವಂತ್ ಒಮ್ಮೆ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಪುನಹ ಅಸೌಖ್ಯಕ್ಕೊಳಗಾದರು. ಮತ್ತೆ ಮೇಲೇಳಲೇ ಇಲ್ಲ.
ಸಾವಂತ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ