ದೇಶ

ಜಡ್ಜ್ ಆಗಲಿದ್ದಾರೆ ಶೇ.70 ಅಂಧತ್ವದ ಸುರೇಂದ್ರಮೋಹನ್

ಜಡ್ಜ್ ಆಗಲಿದ್ದಾರೆ ಶೇ.70 ಅಂಧತ್ವದ ಸುರೇಂದ್ರಮೋಹನ್
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಮುಕ್ಕಾಲು ಪಾಲು ಅಂಧತ್ವಕ್ಕೆ ಒಳಗಾಗಿರುವ ಚೆನ್ನೈನ ಸಿಬಿಐ ವಕೀಲರೊಬ್ಬರು ಶೀಘ್ರದಲ್ಲಿ ಜಡ್ಜ್ ಹುದ್ದೆ ಅಲಂಕರಿಸುವ ಅದೃಷ್ಟದಲಿದ್ದಾರೆ. ಸಿವಿಲ್ ಜಡ್ಜ್ ಹುದ್ದೆಯೊಂದನ್ನು ಅವರಿಗಾಗಿಯೇ ಮೀಸಲಿಡಬೇಕೆಂದು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ, ನ್ಯಾಯಾಲಯದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿ ದಾಖಲಾಗಲಿದೆ.

ಜಡ್ಜ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ತಿರುವೋತ್ರಿಯೂರ್‍ನ ಸುರೇಂದ್ರ ಮೋಹನ್(29)ಉತ್ತೀರ್ಣರಾಗಿದ್ದರೂ ಮೌಖಿಕ ಪರೀಕ್ಷೆಗೆ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ. ಸ್ವತಃ ವಕೀಲ ರಾಗಿದ್ದ ಅವರು ತಮ್ಮನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳ ಬೇಕೆಂದು ರಿಟ್ ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ಆದೇಶ ನೀಡಿದ ಕೋರ್ಟ್ ಅವರಿಗೆ ಪರೀಕ್ಷೆಗೆ ಅವಕಾಶ ನೀಡಿತು.

ಲಿಖಿತ, ಮೌಖಿಕ ಪರೀಕ್ಷೆ ಎರಡರಲ್ಲೂ ತೇರ್ಗಡೆಯಾಗಿದ್ದ ಸುರೇಂದ್ರ ಜಡ್ಜ್ ಹುದ್ದೆಗೆಗೆ ಆಯ್ಕೆಯಾಗುವ ಎಲ್ಲ ಅರ್ಹತೆಗಳನ್ನೂ ಪಡೆದಿದ್ದರು. ಆದರೆ ಸರ್ಕಾರ ಅವರನ್ನು ಪರಿಗಣಿಸಲೇ ಇಲ್ಲ. ಕಾರಣ ಅವರಿಗಿದ್ದ ಭಾಗಶಃ ಅಂಧತ್ವ! ಶೇ. 70 ಅಂಧತ್ವ ಇದ್ದದ್ದು ನಿಯಮದ ಪ್ರಕಾರವೇ ಅವರು ಹೊರಗಿರುವಂತಾಯಿತು. ಆದರೆ ಸುಪ್ರೀಂಕೋರ್ಟ್ ಜಡ್ಜ್ ಗಳ ಕಾರ್ಯ ವಿಧಾನ, ಇತರ ಅಂಶಗಳನ್ನು ಪರಿಶೀಲಿಸಿ, ಶೇ.70 ಅಂಧತ್ವ ಅನರ್ಹತೆಗೆ ಕಾರಣವಾಗಕೂಡದು ಎಂದು ಸರ್ಕಾರಕ್ಕೆ ಸೂಚಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.