ದೆಹಲಿ ಸರಣಿ ಅತ್ಯಾಚಾರಿ ರವೀಂದರ್ ಕುಮಾರ್ ತಿಹಾರ್ ಜೈಲಿಗೆ ಶಿಫ್ಟ್

ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದ್ದ ಸರಣಿ ಅತ್ಯಾಚಾರಿ ಹಾಗೂ ಕೊಲೆಗಾರ ರವೀಂದರ್...
ಆರೋಪಿ ರವೀಂದರ್ ಸಿಂಗ್
ಆರೋಪಿ ರವೀಂದರ್ ಸಿಂಗ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದ್ದ ಸರಣಿ ಅತ್ಯಾಚಾರಿ ಹಾಗೂ ಕೊಲೆಗಾರ ರವೀಂದರ್ ಕುಮಾರ್ ನನ್ನು 14 ದಿನ ತಿಹಾರ್ ಜೈಲಿನಲ್ಲಿಡುವಂತೆ ದೆಹಲಿ ಕೋರ್ಟ್ ಸೂಚನೆ ನೀಡಿದೆ. 24 ವರ್ಷದ ರವೀಂದರ್ ಕುಮಾರ್ ವಿರುದ್ಧ 27 ಕೇಸುಗಳು ದಾಖಲಾಗಿವೆ.

ದೆಹಲಿಯ ರೋಹಿಣಿ ಕೋರ್ಟ್ ಬಳಿ ವಕೀಲರು ಕುಮಾರ್ ಗೆ ಕಪಾಳ ಮೋಕ್ಷ ಮಾಡಿದ ವರದಿಯಾಗಿದೆ. 2008 ರಿಂದ ಇಲ್ಲಿಯವರೆಗೂ ದೆಹಲಿಯಲ್ಲಿ ಸುಮಾರು 30 ಮಕ್ಕಳ ಅತ್ಯಾಚಾರ ಹಾಗೂ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಭಯಂಕರವಾದ ವಿಷಯವೆಂದರೆ ರವೀಂದರ್ ಕುಮಾರ್ ತನ್ನ 17ನೇ ವಯಸ್ಸಿನಲ್ಲೇ ಅಪರಾಧ ಕೃತ್ಯಗಳಿಗೆ ಕೈ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಕೋಲೇಟ್ ಹಾಗೂ ಕ್ಯಾಂಡಿಯ ಆಮೀಷವೊಡ್ಡಿ ಮಕ್ಕಳನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರವೆಸಗುತ್ತಿದ್ದ. ಒಂದು ವೇಳೆ ಮಕ್ಕಳು ವಿರೋಧ ವ್ಯಕ್ತ ಪಡಿಸಿದರೇ, ಮಕ್ಕಳನ್ನು ಕೊಂದು ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರವೀಂದರ್ ಕುಮಾರ್ ಅಟ್ಟಹಾಸಕ್ಕೆ ದೆಹಲಿ ಮಟ್ರೋ ನಿರ್ಮಾಣ ಕೂಲಿ ಕಾರ್ಮಿಕ ಬಾಲಕಿ ಮೊದಲ ಬಲಿ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com