ಭಾರತದಲ್ಲಿ ಶೇ.30ರಷ್ಟು ವಕೀಲರು ನಕಲಿ: ಬಾರ್ ಕೌನ್ಸಿಲ್ ಅಧ್ಯಕ್ಷ

ಚೆನ್ನೈ: ಭಾರತದಲ್ಲಿ ಶೇ.30ರಷ್ಟು ವಕೀಲರು ನಕಲಿ ಕಾನೂನು ಪದವಿ ಹೊಂದಿದವರಾಗಿದ್ದಾರೆ ಎಂದು ಭಾರತದ ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಶನಿವಾರ ಹೇಳಿದ್ದಾರೆ.
ಬಾರ್ ಕೌನ್ಸಿಲ್ ಆಯೋಜಿಸಿದ್ದ ವಕೀಲರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಿಶ್ರಾ, ದೇಶದಲ್ಲಿ ಶೇ.30ರಷ್ಟು ನಕಲಿ ಕಾನೂನು ಪದವಿ ಹೊಂದಿರುವ ವಕೀಲರಿದ್ದಾರೆ ಎಂದರು. ಅಲ್ಲದೆ ವೃತ್ತಿ ನೀತಿ ಸಂಹಿತೆಯನ್ನು ಮುರಿಯುವ, ಅಶಿಸ್ತಿನ ವರ್ತನೆಯನ್ನು ತೋರುವ ಹಾಗೂ ನಕಲಿ ಕಾನೂನು ಪದವಿ ಹೊಂದಿರುವ ವಕೀಲರನ್ನು ಪತ್ತೆ ಹಚ್ಚಿ ಕಿತ್ತು ಹಾಕುವ ಪ್ರಕ್ರಿಯೆಯನ್ನು ಬಾರ್ ಕೌನ್ಸಿಲ್ ಕೈಗೊಂಡಿರುವುದಾಗಿ ತಿಳಿಸಿದರು.
ಬಾರ್ ಕೌನ್ಸಿಲ್ನ ಒಂದು ಅಂದಾಜಿನ ಪ್ರಕಾರ ಶೇ.30ರಷ್ಟು ವಕೀಲರು ಭಾರತೀಯ ನ್ಯಾಯಾಲಯಗಳಲ್ಲಿ ನಕಲಿ ಕಾನೂನು ಪದವಿ ಆಧಾರದಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದಾರೆ. ದಿಲ್ಲಿ ಕಾನೂನು ಸಚಿವರಾಗಿದ್ದ ವ್ಯಕ್ತಿಯೇ ನಕಲಿ ಕಾನೂನು ಪದವಿ ಹೊಂದಿರುವುದು ಈಚೆಗೆ ಬಹಿರಂಗವಾಗಿರುವ ವಿಷಯವಾಗಿದೆ ಎಂದು ಮನನ್ ಕುಮಾರ್ ಮಿಶ್ರಾ ಹೇಳಿದರು.
ನಕಲಿ ಕಾನೂನು ಪದವಿ ಪಡೆದಿರುವ ವಕೀಲರು ಇಂದು ವಕೀಲ ವೃತ್ತಿಯ ಘನತೆ - ಗೌರವಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ನಕಲಿ ಕಾನೂನು ಪದವಿ ಹೊಂದಿರುವ ನಕಲಿ ವಕೀಲರನ್ನು ಕಾನೂನು ಸೇವಾ ಕ್ಷೇತ್ರದಿಂದ ಕಿತ್ತು ಹಾಕುವ ಕೆಲಸ ಈಗ ನಡೆಯುತ್ತಿದೆ ಎಂದು ಮಿಶ್ರಾ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


