

-ಪ್ಲಾಸ್ಟಿಕ್ ಅಕ್ಕಿ ಬಳಿಕ ಚೀನಾದಿಂದ ಮತ್ತೊಂದು ಶಾಕ್
ಬೆಂಗಳೂರು: ಚೀನಾ ಮೊಬೈಲ್, ಚೀನಾ ಆಟಿಕೆ, ಚೀನಾಎಲೆಕ್ಟ್ರಾನಿಕ್ಸ್ ಕೊಂಡು ಬೇಸ್ತುಬಿದ್ದ ಭಾರತೀಯರು ಈಗ ಬೆಡ್‍ರೂಂನಲ್ಲೂ ಬೆವರುವ ಸುದ್ದಿ ಬಂದಿದೆ! ಮೊಬೈಲ್, ಆಟಿಕೆಗಳಲ್ಲಿ ಚೀನಾದ ನಕಲಿ ಚಮತ್ಕಾರಕ್ಕೆ ಕೇವಲ ಜೇಬು ತೂತು ಮಾಡಿಕೊಳ್ಳುತ್ತಿದ್ದ ಭಾರತೀಯರು ಇದೀಗ ಚೀನಾ ಸರಕಿನ ಕೈವಾಡದ ಕಾರಣಕ್ಕೆ ಜೀವನಪೂರ್ತಿ 'ಅನುಭವಿ'ಸಬೇಕಾದ ಆತಂಕ ಎದುರಾಗಿದೆ.
ಹೌದು, ಚೀನಾದ ನಕಲಿ ಕಾಂಡೋಮ್ಗಳು ಭಾರತೀಯ ಮಾರುಕಟ್ಟೆಯಲ್ಲೂ ಹರಿದಾಡುತ್ತಿದ್ದು, ಹಲವರ 'ಭವಿಷ್ಯ' ಬುಡಮೇಲು ಮಾಡಿವೆ ಎಂದು ಸ್ವತಃ ಚೀನಾದ ಮಾಧ್ಯಮಗಳೇ ಬಹಿರಂಗಪಡಿಸಿವೆ. ಅಪಾಯವಿಲ್ಲ ಎಂದು ಖಾತರಿಪಡಿಸಿಕೊಂಡು ವಿಶ್ವಾಸದಿಂದ 'ಮುಂದುವರಿದ'ವರಿಗೆ ಆಘಾತಕಾರಿ 'ಫಲಿತಾಂಶ' ಕೊಟ್ಟಿರುವ ಚೀನಾ ಕಾಂಡೋಮ್ಗಳು, ಬಳಸಿದವರಿಗೆ ಭವಿಷ್ಯದ ಹೊರೆಯ ಜೊತೆ ದಾಂಪತ್ಯದಲ್ಲಿ ಅಪನಂಬಿಕೆಯ ಬಿರುಗಾಳಿಯನ್ನೂ ಎಬ್ಬಿಸಿವೆ ಎನ್ನಲಾಗಿದೆ.
ಮುಂಜಾಗ್ರತೆ ವಹಿಸಿಯೂ ತನ್ನ ಹೆಂಡತಿ ಎರಡು ಬಾರಿ ತಾಯಿಯಾದಾಗ ವೈದ್ಯರ ಬಳಿ ಹೋದ ವ್ಯಕ್ತಿಯೊಬ್ಬನಿಗೆ, ನಿಜ ತಿಳಿದು ರೋಷ ಉಕ್ಕುವ ಬದಲು ಶಾಕ್ ಆಗಿದೆ. ಆತ ನಕಲಿ ಚೀನಾ ಕಾಂಡೋಮ್ ಬಳಸಿದ ಪರಿಣಾಮ ಆತನ ಪತ್ನಿ ಗರ್ಭಿಣಿಯಾಗಿದ್ದಳು! ತನ್ನ ಎಚ್ಚರಿಕೆ ಹೊರತಾಗಿಯೂ ಹೆಂಡತಿ ತನ್ನನ್ನು 'ತಂದೆಯನ್ನಾಗಿಸಿದರ' ಹಿಂದೆ ಕಾಂಡೋಮ್ ಕೈವಾಡವಿರುದನ್ನು ತಿಳಿದು ಆತ ಬೇಸ್ತುಬಿದ್ದಿದ್ದಾನೆ.
ಆದರೆ, ಬಳಸಿದ್ದು ಆನ್‍ಲೈನ್‍ನಲ್ಲಿ ಖರೀದಿಸಿದ ಕಾಂಡೋಮ್ ಆದ್ದರಿಂದ ಮುಂದೇನೂ ಮಾಡಲಾಗದೆ ಇಬ್ಬರು ಮಕ್ಕಳಿಗೆ ದೆಯಾಗಿ ಭವಿಷ್ಯದ ಜವಾಬ್ದಾರಿಗೆ ಮರುಮಾತಿಲ್ಲದೆ ಹೆಗಲು ಕೊಟ್ಟಿದ್ದಾನೆ ! ಈ ಸುದ್ದಿ ಕೇಳಿದ ಮೇಲೆ ಭಾರತೀಯರು ತಮ್ಮ ಬೆಡ್ ರೂಂನಲ್ಲೂ ನುಗ್ಗಿರಬಹುದಾದ ಚೀನಾ 'ಷಢ್ಯಂತ್ರ'ವನ್ನುಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದು ಒಳಿತು! ಏಕೆಂದರೆ, ಬಳಸುವ ಕಾಂಡೋಮ್ ನಕಲಿಂಯೋ ಅಸಲಿಯೋ ಎಂದು ತಿಳಿಯುವುದೇ ಕಾಲಮಿಂಚಿದ ಮೇಲೆ!
ಆನ್‍ಲೈನ್ ಎಡವಟ್ಟು!
ಚೀನಾದಲ್ಲಿ ಹೆಚ್ಚಿರುವ ನಕಲಿ ಕಾಂಡೋಮ್ ಹಾವಳಿ ತಡೆಯುವ ನಿಟ್ಟಿನಲ್ಲಿ ಸಮರವನ್ನೇಸಾರಿದ್ದ ಅಲ್ಲಿನ ಆಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ 'ನಕಲಿ' ಸರಕು ವಿದೇಶಿ ಮಾರುಕಟ್ಟೆ ಕಂಡುಕೊಂಡಿದ್ದು, ಭಾರತ, ಇಟಲಿ ಮತ್ತಿತರ ರಾಷ್ಟ್ರಗಳಲ್ಲಿ ಹರಿದಾಡತೊಡಗಿವೆ. ಚೀನಾ ಸರಕುಗಳ ಆನ್‍ಲೈನ್ ಬೇಡಿಕೆಯಿಂದಾಗಿ ನಕಲಿ ಸರಕಿನ ಅಸಲಿ ಪರಿಣಾಮ ಬಹಿರಂಗಗೊಳ್ಳುತ್ತಿಲ್ಲ.
ಇಟಲಿ ಕಸ್ಟಮ್ಸ್ ಅಧಿಕಾರಿಗಳು ರೋಮ್ನ ಲಿಯನಾರ್ಡೊ ಡಾವಿಂಚಿ ವಿಮಾನನಿಲ್ದಾಣದಲ್ಲಿ 6 ಲಕ್ಷ ನಕಲಿ ಕಾಂಡೋಮ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಾರ್ಷಿಕ 1 ಶತಕೋಟಿ ಕಾಂಡೋಮ್ ಉತ್ಪಾದಿಸುವ ಚೀನಾ, ಜಗತ್ತಿನ ಬೇಡಿಕೆಯ ಶೇ.25ರಷ್ಟನ್ನು ಪೂರೈಸುತ್ತದೆ. ಆದರೆ, ಪ್ರಸಿದ್ಧ ಬ್ರಾಂಡ್ಗಳ ಹೆಸರಲ್ಲೇ ನಕಲಿ ಉತ್ಪನ್ನ ಇರುವುದರಿಂದ ಬಳಕೆದಾರ ನಕಲಿ ಮತ್ತು ಅಸಲಿ ನಡುವೆವ್ಯತ್ಯಾಸ ಕಂಡುಕೊಳ್ಳುವುದು ಕಷ್ಟಸಾಧ್ಯ. ಸಂಗಾತಿ ಗರ್ಭಿಣಿಯಾದ ಬಳಿಕವೇ ನಕಲಿಕಾಂಡೋಮ್ನ ಅಸಲೀ ರೂಪ ತಿಳಿಯುವುದು!