ರಾಜಕಾರಣಿಗಳ ಭ್ರಷ್ಟತೆಗೆ ಹಾರ್ಮೋನ್ ಕಾರಣ!

ರಾಜಕಾರಣಿಗಳು ಭ್ರಷ್ಟರಾಗಲು ಯಾರು ಕಾರಣ? ಭ್ರಷ್ಟಾಚಾರ ಮಾಡಿದರೂ ಹೆಗಲ ಮೇಲೆ ಹೊತ್ತುಕೊಂಡು ತಿರುಗುವ ಸಾಮಾಜಿಕ ವ್ಯವಸ್ಥೆಯೇ? ಅಧಿಕಾರದ ಅನಿವಾರ್ಯತೆಯೇ?..
ರಾಜಕಾರಣಿಗಳ ಭ್ರಷ್ಟತೆಗೆ ಹಾರ್ಮೋನ್ ಕಾರಣ
ರಾಜಕಾರಣಿಗಳ ಭ್ರಷ್ಟತೆಗೆ ಹಾರ್ಮೋನ್ ಕಾರಣ

ಲಂಡನ್: ರಾಜಕಾರಣಿಗಳು ಭ್ರಷ್ಟರಾಗಲು ಯಾರು ಕಾರಣ? ಭ್ರಷ್ಟಾಚಾರ ಮಾಡಿದರೂ ಹೆಗಲ ಮೇಲೆ ಹೊತ್ತುಕೊಂಡು ತಿರುಗುವ ಸಾಮಾಜಿಕ ವ್ಯವಸ್ಥೆಯೇ? ಅಧಿಕಾರದ ಅನಿವಾರ್ಯತೆಯೇ?
ಇದೆಲ್ಲವೂ ಒಂದು ಕಾರಣ. ಆದರೆ, ರಾಜಕಾರಣಿಗಳು ಭ್ರಷ್ಟರಾಗುವ ಹಿಂದೆ ಅಚ್ಚರಿಯ ವೈಜ್ಞಾನಿಕ ಹಿನ್ನೆಲೆಯೂ ಇದೆ ಯಂತೆ. ಸೆಕ್ಸ್ ಹಾರ್ಮೋನ್ ಟೆಸ್ಟೋಸ್ಟೆರೋನ್ ಹೆಚ್ಚಿನ ಪ್ರಮಾಣದಲ್ಲಿರುವ ವ್ಯಕ್ತಿಗಳು ಸುಲಭವಾಗಿ ಭ್ರಷ್ಟಾಚಾರದತ್ತ ಆಕರ್ಷಿತರಾಗುತ್ತಾರಂತೆ!

ಹೀಗೆಂದು ಹೇಳ್ತಾ ಇರೋದು ಸ್ವಿಜರ್‍ಲೆಂಡ್‍ನ ಲ್ಯೂಸ್ಯಾನ್ ವಿಶ್ವವಿದ್ಯಾಲಯದ ಸಂಶೋಧಕರು. ಸಾಮಾನ್ಯವಾಗಿ ಮನುಷ್ಯರು ಸುಲಭವಾಗಿ ಭ್ರಷ್ಟಾಚಾರದ ಗುಂಡಿಗೆ ಬೀಳುವವರಾಗಿರುತ್ತಾರೆ. ಆದರೆ, ಟೆಸ್ಟೋಸ್ಟೆರೋನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿರುವ ವ್ಯಕ್ತಿ ತಮ್ಮ ನಿರ್ಧಾರದಿಂದ ಇನ್ನೊಬ್ಬರ ಮೇಲಾಗುವ ಮಾನಸಿಕ ಪರಿಣಾಮಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಗುರಿಯೇನಿದ್ದರೂ ಸ್ವಕೇಂದ್ರಿತ ಅಥವಾ ಸ್ವಂತ ಲಾಭವೇ ಆಗಿರುತ್ತದೆ. ಇದರಿಂದ ಅವರು ಹೆಚ್ಚಿನ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ ಎನ್ನುತ್ತದೆ ಸಂಶೋಧನೆ.

ನಾಯಕತ್ವ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸ್ವಿಜರ್ ಲೆಂಡ್ ವಿವಿಯ ಪ್ರೊ.ಜಾನ್ ಆ್ಯಂಟೊನಾಕಿಸ್ ನೇತೃತ್ವದ ತಂಡ 718 ವಾಣಿಜ್ಯ ವಿದ್ಯಾರ್ಥಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ಈ ವಿಚಾರ ಬಹಿರಂಗವಾಗಿದೆ. ನಡವಳಿಕೆಯ ಪರೀಕ್ಷೆಯಿಂದ ಅಧಿಕಾರ ಹಾಗೂ ಭ್ರಷ್ಟಾಚಾರದ ನಡುವೆ ಇರುವ ಸಂಬಂಧ ಮತ್ತೊಮ್ಮೆ ಸಾಭೀತಾಗಿದೆ ಎಂದೂ ಸಂಶೋಧನೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com