ಶರ್ಮಾ ಸಿಐಸಿ, ಚೌಧರಿ ಸಿವಿಸಿ?

ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ವಿಜಯ್ ಶರ್ಮಾ ಮತ್ತು ಕೇಂದ್ರ ಜಾಗೃತ ದಳದ ಮುಖ್ಯ ಆಯುಕ್ತರಾಗಿ ಕೆ.ವಿ.ಚೌಧರಿ ನೇಮಕ ವಾಗುವ ಸಾಧ್ಯತೆ ...
ವಿಜಯ್ ಶರ್ಮಾ (ಚಿತ್ರ ಕೃಪೆ: cic.gov.in)
ವಿಜಯ್ ಶರ್ಮಾ (ಚಿತ್ರ ಕೃಪೆ: cic.gov.in)

ನವದೆಹಲಿ: ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ವಿಜಯ್ ಶರ್ಮಾ ಮತ್ತು ಕೇಂದ್ರ ಜಾಗೃತ ದಳದ ಮುಖ್ಯ ಆಯುಕ್ತರಾಗಿ ಕೆ.ವಿ.ಚೌಧರಿ ನೇಮಕ ವಾಗುವ ಸಾಧ್ಯತೆ ಹೆಚ್ಚಾಗಿದೆ. ಶರ್ಮಾ ಮಾಹಿತಿ ಆಯೋಗದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೌಧರಿ ಕೇಂದ್ರ ನೇರ ತೆರಿಗೆ ಮಂಡಳಿಯ ನಿವೃತ್ತ ಮುಖ್ಯಸ್ಥರಾಗಿದ್ದವರು. ಒಂದು ವರ್ಷ ದಿಂದ ಭರ್ತಿಯಾಗದೆ ಉಳಿದಿದ್ದ 2 ಹುದ್ದೆಗಳಿಗೆ ನೇಮಕ ಮಾಡುವ ಬಗ್ಗೆ ಪ್ರಧಾನಿ ಮೋದಿ ನಿವಾಸದಲ್ಲಿ ಸೋಮವಾರ ನಡೆದಿದ್ದ ಸಭೆಯಲ್ಲಿ ಅವರಿಬ್ಬರ ಹೆಸರನ್ನು ಅಂತಿಮ ಪಡಿಸಿ ರಾಷ್ಟ್ರಪತಿಯವರ ಅಂಗೀಕಾರಕ್ಕಾಗಿ ಕಳುಹಿಸಲಾಗಿದೆ. ಗುರುವಾರ ಅವರು ಸಮಿತಿ ಶಿಫಾರಸಿಗೆ ಒಪ್ಪಿಗೆ ಸೂಚಿಸಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಡಾ.ಜಿತೇಂದ್ರ ಸಿಂಗ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗವಹಿಸಿದ್ದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com