ದೆಹಲಿ ಸಿಎಂ ಕೇಜ್ರಿವಾಲ್ ಮನೆ ಮುಂದೆ ಬಿಜೆಪಿ ಮಹಿಳಾ ಘಟಕದ ಪ್ರತಿಭಟನೆ
ದೇಶ
ಸೋಮನಾಥ್ ಭಾರ್ತಿ ವಿರುದ್ಧ ಬಿಜೆಪಿ ಮಹಿಳಾ ಘಟಕ ಪ್ರತಿಭಟನೆ
ಆಪ್ ಮುಖಂಡ ಸೋಮನಾಥ್ ಭಾರ್ತಿ ವಿರುದ್ಧ ದೆಹಲಿ ಬಿಜೆಪಿ ಮಹಿಳಾ ಘಟಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ನಡೆಸಿತು.
ನವದೆಹಲಿ: ಆಪ್ ಮುಖಂಡ ಸೋಮನಾಥ್ ಭಾರ್ತಿ ವಿರುದ್ಧ ದೆಹಲಿ ಬಿಜೆಪಿ ಮಹಿಳಾ ಘಟಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂಬಂಧ ಸೋಮನಾಥ್ ಭಾರ್ತಿ ಪತ್ನಿ ಲಿಪಿಕಾ ಮಿತ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಸಿಎಂ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು ಸೋಮನಾಥ್ ಭಾರ್ತಿ ಕಾರು ತಡೆದು, ಅವರ ವಿರುದ್ಧ ಧಿಕ್ಕಾರ ಕೂಗಿ ಕಪ್ಪು ಬಾವುಟ ಪ್ರದರ್ಶಿಸಿದರು.
ಸೋಮನಾಥ್ ಭಾರ್ತಿ ಅವರ ಪತ್ನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅವರಿಗಿರುವ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಭರವಸೆ ನೀಡಿದರು. ಈ ನಡುವೆ ದೆಹಲಿ ಮಹಿಳಾ ಆಯೋಗ ಸೋಮನಾಥ್ ಭಾರ್ತಿಗೆ ನೋಟೀಸ್ ನೀಡಿದ್ದು ಉತ್ತರಿಸುವಂತೆ ಸೂಚಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ