ಎಚ್-1ಬಿ ವೀಸಾ ಉಲ್ಲಂಘನೆ: ಟಿಸಿಎಸ್, ಇನ್ಫೋಸಿಸ್ ವಿರುದ್ಧ ತನಿಖೆಗೆ ಅಮೆರಿಕ ಚಿಂತನೆ

ಭಾರತದ ಐಟಿ ದಿಗ್ಗಜ ಎಂದೇ ಖ್ಯಾತಿಗಳಿಸಿರುವ ಟಿಸಿಎಸ್ ಹಾಗೂ ಇನ್ಫೋಸಿಸ್ ಸಂಸ್ಥೆ ವಿರುದ್ಧ ಕೇಳಿಬಂದಿರುವ ಎಚ್-1ಬಿ ವೀಸಾ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಕಾರ್ಮಿಕ ಇಲಾಖೆಯು ಟಿಸಿಎಸ್ ಹಾಗೂ ಇನ್ಫೋಸಿಸ್ ಸಂಸ್ಥೆ ವಿರುದ್ಧ ತನಿಖೆ ನಡೆಸಲು ಚಿಂತನೆ...
ಎಚ್-1ಬಿ ವೀಸಾ ಉಲ್ಲಂಘನೆ: ಟಿಸಿಎಸ್, ಇನ್ಫೋಸಿಸ್ ವಿರುದ್ಧ ತನಿಖೆಗೆ ಅಮೆರಿಕ ಚಿಂತನೆ
ಎಚ್-1ಬಿ ವೀಸಾ ಉಲ್ಲಂಘನೆ: ಟಿಸಿಎಸ್, ಇನ್ಫೋಸಿಸ್ ವಿರುದ್ಧ ತನಿಖೆಗೆ ಅಮೆರಿಕ ಚಿಂತನೆ

ನ್ಯೂಯಾರ್ಕ್: ಭಾರತದ ಐಟಿ ದಿಗ್ಗಜ ಎಂದೇ ಖ್ಯಾತಿಗಳಿಸಿರುವ ಟಿಸಿಎಸ್ ಹಾಗೂ ಇನ್ಫೋಸಿಸ್ ಸಂಸ್ಥೆ ವಿರುದ್ಧ ಕೇಳಿಬಂದಿರುವ ಎಚ್-1ಬಿ ವೀಸಾ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಕಾರ್ಮಿಕ ಇಲಾಖೆಯು ಟಿಸಿಎಸ್ ಹಾಗೂ ಇನ್ಫೋಸಿಸ್ ಸಂಸ್ಥೆ ವಿರುದ್ಧ ತನಿಖೆ ನಡೆಸಲು ಚಿಂತನೆ ನಡೆಸಿದೆ ಎಂದು ಶುಕ್ರವಾರ ತಿಳಿದುಬಂದಿದೆ.

ಅಮೆರಿಕದ ಕಾರ್ಮಿಕ ಇಲಾಖೆಯು ಭಾರತೀಯ ಹೊರಗುತ್ತಿಗೆ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಸಿಸ್‌ ತನ್ನ ಸಿಬ್ಬಂದಿ ಎಚ್‌-1ಬಿ ವೀಸಾ ನೀಡಿಕೆಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ತನಿಖೆ ನಡೆಸಲು ಅಮೆರಿಕ ಕಾರ್ಮಿಕ ಇಲಾಖೆಯು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಸದರ್ನ್ ಕ್ಯಾಲಿಫೋರ್ನಿಯಾ ಎಡಿಸನ್ ನಲ್ಲಿ ವಿದ್ಯುತ್ ಸೌಲಭ್ಯಗಳ ಬಳಕೆ ವೇಳೆ ಹೊರಗುತ್ತಿಗೆ ಕಂಪನಿಗಳ ವಿದೇಶಿ ನೌಕರರು ವೀಸಾ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಅಮೆರಿಕ ಕಾರ್ಮಿಕ ಇಲಾಖೆಯು ತನಿಖೆ ನಡೆಸಲು ಮುಂದಾಗಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ವರದಿಯಲ್ಲಿ ಇತ್ತೀಚೆಗಷ್ಟೇ ವಿದ್ಯುತ್ ಕಂಪನಿಯು 500ಕ್ಕೂ ಅಧಿಕ ತಂತ್ರಜ್ಞರನ್ನು ಉದ್ಯೋಗದಿಂದ ವಜಾಗೊಳಿಸಿತ್ತು. ವಜಾಗೊಂಡ ಕಾರ್ಮಿಕರನ್ನು ಭಾರತೀಯ ಕಂಪನಿಗಳು ಕಾರ್ಮಿಕ ವಲಸೆ ವೀಸಾಗಳ ಅಡಿಯಲ್ಲಿ ಇಲಿನೋಯ್ಸ್ ಸೆನೆಟರ್ ರಿಚರ್ಡ್ ಡರ್ಬಿನ್ ಮತ್ತು ಅಲಬಾಮಾ ಸೆನೆಟರ್ ಡೆಫ್ ಸೆಷನ್ಸ್ ಎಂಬ ಸಂಸ್ಥೆಗಳ ಮೂಲಕ ಭಾರತಕ್ಕೆ ಕರೆತಂದು ತರಭೇತಿ ನೀಡುತ್ತಿದೆ ಎಂದು ತಿಳಿಸಿತ್ತು.

ಈ ಹಿಂದೆಯೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಅಮೆರಿಕದ ವಾಲ್ಟ್ ಡಿಸ್ನಿ ಸಂಸ್ಥೆಯು ನೂರಾರು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿ, ಆ ಜಾಗಕ್ಕೆ ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕಗೆ ತೆರಳಿರುವ ಭಾರತೀಯರನ್ನು ನೇಮಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿತ್ತು. ಈ ಎಲ್ಲಾ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಕಾರ್ಮಿಕ ಇಲಾಖೆಯು ಇದೀಗ ಭಾರತೀಯ ಇನ್ಫೋಸಿಸ್ ಹಾಗೂ ಟಿಸಿಎಸ್ ಕಂಪನಿಗಳ ವಿರುದ್ಧ ದೀರ್ಘ ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com