ತೆರಿಗೆ ವಿರೋಧಿಸಿ ಗ್ರಾಹಕರಿಗೆ ಉಚಿತ ಸೆಕ್ಸ್, ಡ್ರಿಂಕ್ಸ್ ಆಫರ್

ಆಸ್ಟ್ರೀಯಾ ಸರ್ಕಾರ ಬ್ರಾಥಲ್ ಸೆಂಟರ್ ಮೇಲೆ ವಿಧಿಸಿರುವ ಅಧಿಕ ಪ್ರಮಾಣದ ಟ್ಯಾಕ್ಸ್ ವಿರೋಧಿಸಿರುವ ಇಲ್ಲಿನ ಪಾಶ್ಚಾ ಎಂಬ ಬ್ರಾಥಲ್ ಸೆಂಟರ್...
ವೇಶ್ಯಾಗೃಹ
ವೇಶ್ಯಾಗೃಹ

ವಿಯನ್ನಾ: ಆಸ್ಟ್ರೀಯಾ ಸರ್ಕಾರ ಬ್ರಾಥಲ್ ಸೆಂಟರ್ ಮೇಲೆ ವಿಧಿಸಿರುವ ಅಧಿಕ ಪ್ರಮಾಣದ ಟ್ಯಾಕ್ಸ್ ವಿರೋಧಿಸಿರುವ ಇಲ್ಲಿನ ಪಾಶ್ಚಾ ಎಂಬ ಬ್ರಾಥಲ್ ಸೆಂಟರ್ ಉಚಿತ ಸೆಕ್ಸ್ ಆಫರ್ ನೀಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸುತ್ತಿದೆ.

ಆಸ್ಟ್ರೀಯಾ ಸರ್ಕಾರದ ಆದೇಶಕ್ಕೆ ಮಣಿಯುವುದಿಲ್ಲ. ಇನ್ನು ಮುಂದೆ ನಾವು ಟ್ಯಾಕ್ಸ್ ಕೊಡುವುದಿಲ್ಲ. ಬದಲಾಗಿ ಇಲ್ಲಿಗೆ ಬರುವ ಗಿರಾಕಿಗಳಿಗೆ ಈ ಬೇಸಿಗೆ ಪೂರ್ತಿ ಫ್ರೀ ಎಂಟ್ರೆನ್ಸ್, ಫ್ರೀ ಡ್ರಿಂಕ್ಸ್, ಫ್ರೀ ಸೆಕ್ಸ್’ ಎಂದು ಪಾಶ್ಚಾ ಸಂಸ್ಥೆ ಘೋಷಿಸಿದ್ದು ಈ ಉಚಿತ ಆಫರ್ ಕೇಳಿದ  ಪಡ್ಡೆ ಹುಡುಗರು ಇದೀಗ ಈ ವೇಶ್ಯಾವಾಟಿಕೆ ಕೇಂದ್ರದ ಮುಂದೆ ಕ್ಯೂ ನಿಂತಿದ್ದಾರಂತೆ.

ಈ ಕುರಿತು, ಪ್ರತಿಕ್ರಿಯಿಸಿರುವ ಮಾಲೀಕ, ನನ್ನ ಬಳಿ ಕೆಲಸ ಮಾಡುವ ವೇಶ್ಯೆಯರಿಗೆ ತಿಂಗಳಿಗೆ 10000 ಯೂರೋವನ್ನ ಪರಿಹಾರವಾಗಿ ನನ್ನ ಹಣ ನೀಡುತ್ತೇನೆ. ಆದರೆ, ಅನ್ಯಾಯವಾಗಿ ಇಷ್ಟೊಂದು ತೆರಿಗೆ ಕಟ್ಟಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com