ಜಾರ್ಜಿಯಾದ ರಸ್ತೆಯಲ್ಲಿ ಕಾಡುಮೃಗಗಳು

ಸಿಂಹ, ಹುಲಿ, ಘೇಂಡಾಮೃಗ ಮತ್ತಿತರ ಪ್ರಾಣಿಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ... ಜನ ಮಾತ್ರ ಜೀವ ಬೆದರಿಕೆಯಿಂದ ಮನೆಯೊಳಗೆ...
ರಾಜಧಾನಿ ತುಬುಲಿಸಿ ರಸ್ತೆಯಲ್ಲಿ ಕಂಡು ಬಂದ ನೀರಾನೆ
ರಾಜಧಾನಿ ತುಬುಲಿಸಿ ರಸ್ತೆಯಲ್ಲಿ ಕಂಡು ಬಂದ ನೀರಾನೆ

ತುಬುಲಿಸಿ: ಸಿಂಹ, ಹುಲಿ, ಘೇಂಡಾಮೃಗ ಮತ್ತಿತರ ಪ್ರಾಣಿಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ... ಜನ ಮಾತ್ರ ಜೀವ ಬೆದರಿಕೆಯಿಂದ ಮನೆಯೊಳಗೆ ಅಡಗಿ ಕೂತಿದ್ದಾರೆ! ಇದು ಜಾರ್ಜಿಯಾದ ರಾಜಧಾನಿ ತುಬುಲಿಸಿಯಲ್ಲಿ ಭಾನುವಾರ ಕಂಡ ದೃಶ್ಯ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಬುಲಿಸಿಯಲ್ಲಿ ಭಾರಿ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದ ನಗರದಲ್ಲಿರುವ ಪ್ರಾಣಿ ಸಂಗ್ರಹಾಲಯ ಸಂಪೂರ್ಣವಾಗಿ ಜಲಾವೃತವಾಗಿದ್ದು, ಅಲ್ಲಿದ್ದ ಪ್ರಾಣಿಗಳೆಲ್ಲ ತಪ್ಪಿಸಿಕೊಂಡಿವೆ.ಈ ರೀತಿ ತಪ್ಪಿಸಿಕೊಂಡವುಗಳಲ್ಲಿ ಹುಲಿ, ಸಿಂಹ, ಘೇಂಡಾಮೃಗ, ಆನೆ, ಹಾವಿನಂಥ ಅಪಾಯಕಾರಿ ಪ್ರಾಣಿಗಳೂ ಇವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ಮನೆಯಿಂದ ಹೊರ ಬರದಂತೆ ಸೂಚಿಸಿದೆ. ಈ ನಡುವೆ, ಪೊಲೀಸರು ಮತ್ತು ಸೇನೆಗೆ ಅಪಾಯಕಾರಿ ಪ್ರಾಣಿಗಳನ್ನು ಮತ್ತೆ ಹಿಡಿಯಲು ಅಥವಾ ಗುಂಡಿಟ್ಟುಕೊಲ್ಲಲೂ ಆದೇಶಿಸಿದೆ.
ಪ್ರವಾಹದ ಅಬ್ಬರಕ್ಕೆ ಸಿಲುಕಿ ಪ್ರಾಣಿ ಸಂಗ್ರಹಾಲಯ ಸಂಪೂರ್ಣವಾಗಿ ನಾಶವಾಗಿದೆ. ಅಲ್ಲೀಗ ಯಾವುದೇ ಪ್ರಾಣಿಗಳಿಲ್ಲ. ಹಾಗಾಗಿ ಮುಕ್ತವಾಗಿ ಸಂಚರಿಸುತ್ತಿರುವ ಪ್ರಾಣಿಗಳ ಮತ್ತೆ ಹಿಡಿಯುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಾಣಿಗಳು ಝೂನಿಂದ ತಪ್ಪಿಸಿಕೊಳ್ಳುವ ವೇಳೆ ಇಬ್ಬರು ಸಿಬ್ಬಂದಿಯನ್ನು ಕೊಂದು ಹಾಕಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com