ಎಲ್‍ಇಟಿ ಉಗ್ರ ಸಂಘಟನೆಯ ಬಗ್ಗೆ ಪಾಕ್ ಮೌನ: ಅಮೆರಿಕ

ಪಾಕಿಸ್ತಾನ ಸರ್ಕಾರವು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮೇಲೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ವರದಿ ತಿಳಿಸಿದೆ.ಅಲ್ಲದೇ, ಭಾರತ ಉಗ್ರರ ಮೊದಲ ಟಾರ್ಗೆಟ್ ಆಗಿದೆ ಎಂದೂ ಕೂಡ ತಿಳಿಸಿದೆ...
ಅಮೆರಿಕ
ಅಮೆರಿಕ

ವಾಷಿಂಗ್ಟನ್: ಪಾಕಿಸ್ತಾನ ಸರ್ಕಾರವು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮೇಲೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ವರದಿ ತಿಳಿಸಿದೆ.ಅಲ್ಲದೇ, ಭಾರತ ಉಗ್ರರ ಮೊದಲ ಟಾರ್ಗೆಟ್ ಆಗಿದೆ ಎಂದೂ ಕೂಡ ತಿಳಿಸಿದೆ.

ಎಲ್‍ಇಟಿಯಿಂದ `ಕಾರ್ಯಾಚರಣೆ, ತರಬೇತಿ, ಭಾರತದ ವಿರುದ್ಧ ಪ್ರಚಾರ ಹಾಗೂ ಹಣ ಸಂಗ್ರಹ ಕಾರ್ಯಗಳೂ ಮುಂದುವರೆದಿದೆ. ಆದರೆ ಪಾಕ್ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ. ಪಾಕಿಸ್ತಾನದೊಳಗೆ ದಾಳಿ ನಡೆಸಿದ್ದ ಉಗ್ರ ಸಂಘಟನೆಯಾದ ಟಿಟಿಪಿ(ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ)ಯ ಮೇಲೆ ಪಾಕ್ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ.ಆದರೆ ಉಗ್ರ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ಎಲ್‍ಇಟಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶುಕ್ರವಾರ ಅಮೆರಿಕ ಸರ್ಕಾರ ಬಿಡುಗಡೆಗೊಳಿಸಿದ 2014ರಲ್ಲಿ ಭಯೋತ್ಪಾದನೆ ಎಂಬ ವರದಿಯಲ್ಲಿ ತಿಳಿಸಲಾಗಿದೆ.

ಆಫ್ಘನ್ ತಾಲಿಬಾನ್ ಮತ್ತು ಹಕ್ಕಾನಿ ಜಾಲಗಳು ಪಾಕಿಸ್ತಾನದಲ್ಲಿ ಸುರಕ್ಷಿತವಾಗಿ ತಮ್ಮ ಆಶ್ರಯ ತಾಣವನ್ನು ಹುಡುಕಿಕೊಂಡಿದೆ. ಪಾಕ್‍ನ ಮಿಲಿಟರಿ ಪಡೆಯು, ಈ ಗುಂಪುಗಳ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರೂ ಪ್ರತ್ಯಕ್ಷವಾಗಿ ಅವರನ್ನು ಗುರಿ ಮಾಡಿಲ್ಲ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com