ಮ್ಯಾಗಿ ನಿಷೇಧದ ನಂತರ ಪ್ಯಾಕಡ್ ಹಾಲು ನೀರಿಗೆ ಗಂಡಾಂತರ?

ಅನುಮತಿಗಿಂತ ಹೆಚ್ಚಿನ ಪ್ರಮಾಣ ಸೀಸವನ್ನು ಬಳಸಿದ್ದರಿಂದ ಬಹುತೇಕ ಜನರ ನೆಚ್ಚಿನ ಟು ಮಿನಿಟ್ಸ್ ಮ್ಯಾಗಿಗೆ ದೇಶದ್ಯಾಂತ ನಿಷೇಧ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅನುಮತಿಗಿಂತ ಹೆಚ್ಚಿನ ಪ್ರಮಾಣ ಸೀಸವನ್ನು ಬಳಸಿದ್ದರಿಂದ ಬಹುತೇಕ ಜನರ ನೆಚ್ಚಿನ ಟು ಮಿನಿಟ್ಸ್ ಮ್ಯಾಗಿಗೆ ದೇಶದ್ಯಾಂತ ನಿಷೇಧ ಹೇರಿದ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಪ್ಯಾಕೇಜಡ್ ಹಾಲು ಮತ್ತು ನೀರಿನ ಕಡೆಗೆ ತನ್ನ ದೃಷ್ಟಿ ಬೀರಿದೆ.
ದೇಶದ್ಯಾಂತ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ಯಾಕೆಟ್ ನಲ್ಲಿ ಸಿಗುವ ಆಹಾರ, ನೀರು, ಹಾಲಿನ ಗುಣಮಟ್ಟ ಪರೀಕ್ಷಿಸುವಂತೆ ಎಲ್ಲಾ ರಾಜ್ಯ.ಗಳಿಗೂ ಸೂಚನೆ ನೀಡಿದೆ.

ಇನ್ನು ಎಲ್ಲಾ ರಾಜ್ಯಗಳ ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರದ ಆಯುಕ್ತರು ಪ್ಯಾಕಡ್ ಹಾಲು, ನೀರು ಮತ್ತು ಅಡುಗೆ ಎಣ್ಣೆ ಪರೀಕ್ಷೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದು ತಿಳಿಸಿದೆ. ಎಲ್ಲಾ ಮಾರುಕಟ್ಟೆಗಳಲ್ಲಿ ಸಿಗುವ ಪ್ಯಾಕಡ್ ಪದಾರ್ಥಗಳ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವಂತೆಯೂ ಪ್ರಾಧಿಕಾರ ಸೂಚಿಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮ್ಯಾಗಿ ನೂಡಲ್ಸ್ ಅನ್ನು ಜೂನ್ 5 ರಂದು ನಿಷೇಧಿಸಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com