ಲಲಿತ್ ಮೋದಿ ಕಾರ್ಯದರ್ಶಿಯಿಂದ ರಾಜಕೀಯ ಸಂಬಂಧ ಇ ಮೇಲ್ ಡಿಲೀಟ್

ಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಅಧಿಕೃತ ಇಮೇಲ್ ಗಳನ್ನು ಅವರ ಕಾರ್ಯದರ್ಶಿ ದೀಪಾ ಪಲೇಕರ್ ಅವರು ಡಿಲೀಟ್ ಮಾಡಿರುವ...
ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ
ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ
Updated on: 

ನವದೆಹಲಿ: ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರ ಅಧಿಕೃತ ಇಮೇಲ್ ಗಳನ್ನು ಅವರ ಕಾರ್ಯದರ್ಶಿ ದೀಪಾ ಪಲೇಕರ್ ಅವರು ಡಿಲೀಟ್ ಮಾಡಿರುವ ಮಾಹಿತಿಯೊಂದನ್ನು ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಹಿರಂಗಪಡಿಸಿದ್ದಾರೆ.

ದೀಪಾ ಪಲೇಕರ್ ಅವರು ಲಲಿತ್ ಮೋದಿಗೆ ಸೇರಿದ 9 ಕಂಪನಿಗಳಿಗೆ ನಿರ್ದೇಶಕಿಯಾಗಿದ್ದು, ಲಲಿತ್ ಮೋದಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಯಮ ಬಾಹಿರವಾಗಿ ಲಲಿತ್ ಮೋದಿಗೆ ವೀಸಾ ನೀಡಿಕೆ ವಿಚಾರದಲ್ಲಿ ಹಲವು ರಾಜಕೀಯ ಗಣ್ಯರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆಯು ಲಲಿತ್ ಮೋದಿಗೆ ಸೇರಿದ ಎಲ್ಲಾ ವ್ಯವಹಾರ ಸಂಸ್ಥೆಗಳ ಮೇಲೂ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದೆ.

ತೆರಿಗೆ ಇಲಾಖೆ ನಡೆಸಿದ ತನಿಖೆ ವೇಳೆ ಲಲಿತ್ ಮೋದಿ ಅವರ ಆಪ್ತ ಕಾರ್ಯದರ್ಶಿ ದೀಪಾ ಪಲೇಕರ್ ಅವರು, 2010 ಏಪ್ರಿಲ್ ತಿಂಗಳಿನ ಲಲಿತ್ ಮೋದಿ ಸೇರಿದ ಎಲ್ಲಾ ಇಮೇಲ್ ಗಳನ್ನು ತೆಗೆದುಹಾಕಿರುವುದು ಕಂಡು ಬಂದಿದೆ. ನಂತರ ದೀಪಾ ಅವರನ್ನು ವಿಚಾರಣೆಗೊಳಪಡಿಸಿದಾಗ  2010ರ ಏಪ್ರಿಲ್ ನಲ್ಲಿ ಬಂದ ಇಮೇಲ್ ವಿಳಾಸದ ಎಲ್ಲಾ ಕೆಲಸಗಳು ಸಂಪೂರ್ಣಗೊಂಡಿತ್ತು. ಹೀಗಾಗಿ ಅವಶ್ಯಕವಿಲ್ಲದ ಕಾರಣ ಇಮೇಲ್ ಗಳನ್ನು ತೆಗೆದುಹಾಕಲಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com