

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಇಂದು ಬೆಳಗ್ಗೆ 6.40 ಕ್ಕೆ ಭೂಕಂಪನ ಅನುಭವಕ್ಕೆ ಬಂದಿದೆ. ರಿಕ್ಟರ್ ಮಾಪನದಲ್ಲಿ 5.6 ಮ್ಯಾಗ್ನಿಟ್ಯೂಡ್ ತೀವ್ರತೆ ದಾಖಲಾಗಿದೆ. ಭೂತಾನ್, ಬಾಂಗ್ಲಾದೇಶ್, ನೇಪಾಳ ಮೊದಲಾದ ಸ್ಥಳಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ಅಸ್ಸಾಂನಿಂದ 23 ಕಿಮೀ ದೂರದಲ್ಲಿರುವ ಬಸುಗಾಂವ್ ಎಂಬಲ್ಲಿ ಭೂಕಂಪದ ಕೇಂದ್ರಬಿಂದು ವಿದೆ. ಭೂಕಂಪನದಿಂದಾಗಿ ಯಾವುದೇ ನಾಶ ನಷ್ಟ ಸಂಭವಿಸಿರುವುದರ ಬಗ್ಗೆ ವರದಿಯಾಗಿಲ್ಲ.