ಉತ್ತರಾಖಂಡದಲ್ಲಿ ಪ್ರವಾಹ: ರಾಜ್ಯದ ಯಾತ್ರಿಗಳಿಗೆ ನೆರವು

ಉತ್ತರಾಖಂಡದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೇದಾರ, ಬದರೀನಾಥ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಕ್ಕಿಕೊಂಡಿರುವ ಕರ್ನಾಟಕ ರಾಜ್ಯದ...
ಉತ್ತರಾಖಂಡದಲ್ಲಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸುತ್ತಿರುವುದು (ಕೃಪೆ ಪಿಟಿಐ)
ಉತ್ತರಾಖಂಡದಲ್ಲಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸುತ್ತಿರುವುದು (ಕೃಪೆ ಪಿಟಿಐ)

ನವದೆಹಲಿ: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೇದಾರ, ಬದರೀನಾಥ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಿಕ್ಕಿಕೊಂಡಿರುವ ಕರ್ನಾಟಕ ರಾಜ್ಯದ ಜನರಿಗೆ ಕರ್ನಾಟಕ ಭವನ ಅಗತ್ಯ ನೆರವು ನೀಡಲಿದೆ. ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಕೆಲವೆಡೆಗಳಿಂದ ಕೇದಾರ, ಬದರೀನಾಥ ಮತ್ತಿತರ ಸ್ಥಳಗಳಿಗೆ ಹೋಗಿರುವ ರಾಜ್ಯದ ಅನೇಕರು ತೊಂದರೆಗೆ ಸಿಕ್ಕಿದ್ದಾರೆ.

ರಾಜ್ಯದ ಜನರಿಗೆ ನೆರವು ಕೊಡುವ ಕುರಿತು ಉತ್ತರಾಖಂಡದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿರುವುದಾಗಿ ಕರ್ನಾಟಕ ಭವನದ ಮೂಲಗಳು ತಿಳಿಸಿವೆ. ತೀವ್ರ ಸಂಕಷ್ಟದಲ್ಲಿರುವ ಕೆಲವರನ್ನು ಹೆಲಿಕಾಪ್ಟರ್ನಲ್ಲಿ ಸ್ಥಳಾಂತರಿಸಲು ಈಗಾಗಲೇ ಉತ್ತರಾಖಂಡ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದಿಂದ ಬರುತ್ತಿರುವ ದೂರವಾಣಿ ಕರೆಗಳ ಮಾಹಿತಿಯನ್ನು ಅಲ್ಲಿನ ಸರ್ಕಾರಕ್ಕೆ ರವಾನಿಸಲಾಗುತ್ತಿದೆ.

ಅದೇ ವೇಳೆ ಉತ್ತರಾಖಂಡದಿಂದ ದೆಹಲಿಗೆ ಬರುವ ಕರ್ನಾಟಕದವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲದೆ ರಾಜ್ಯಕ್ಕೆ ಮರಳಲು ಈಗಾಗಲೇ ಕಾಯ್ದಿರಿಸಿರುವ ರೈಲ್ವೆ ಟಿಕೆಟ್ಗಳನ್ನು ಅವರ ಅಗತ್ಯಕ್ಕೆ ಅನುಗುಣವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು.

ಸಹಾಯವಾಣಿ ಸಂಖ್ಯೆ
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ- 1070 (ಟೋಲ್ ಫ್ರೀ)
ದೆಹಲಿ ಕರ್ನಾಟಕ ಭವನದ ಜಂಟಿ ನಿವಾಸಿ ಆಯುಕ್ತ ರಂಗಸ್ವಾಮಿ: 09868393991

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com