ಒಟ್ಟಿಗೆ ಸಾಯೋಣ ಬಾ ಎಂದ; ಕತ್ತು ಹಿಸುಕಿ ಕೊಂದ

ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣಾಗಲೆಂದು ಹೋದ ಯುವತಿಯನ್ನೇ ಕೊಂದ ಪ್ರೇಮಿಯೊಬ್ಬ ಮತ್ತೆ ಪೊಲೀಸರ ಬಳಿ ಶರಣಾಗಿರುವ ಘಟನೆಯೊಂದು ಮುಂಬೈನ ಕಾಲಚೌಕಿ ಪ್ರದೇಶದಲ್ಲಿ ಭಾನುವಾರ ನಡೆದಿದೆ...
ಪ್ರೇಮಿಯಿಂದ ಕೊಲೆಯಾದ ಯುವತಿ ಎಕ್ತಾ ತಲ್ವಾಡ್ಕರ್ ಹಾಗೂ ಆರೋಪಿ ಪ್ರಸಾದ್ ಸಾವಂತ್ (ಫೋಟೋ ಕೃಪೆ: ಮಿಡ್ ಡೇ.ಕಾಂ)
ಪ್ರೇಮಿಯಿಂದ ಕೊಲೆಯಾದ ಯುವತಿ ಎಕ್ತಾ ತಲ್ವಾಡ್ಕರ್ ಹಾಗೂ ಆರೋಪಿ ಪ್ರಸಾದ್ ಸಾವಂತ್ (ಫೋಟೋ ಕೃಪೆ: ಮಿಡ್ ಡೇ.ಕಾಂ)
Updated on: 

ಮುಂಬೈ: ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣಾಗಲೆಂದು ಹೋದ ಯುವತಿಯನ್ನು ಕತ್ತು ಹಿಸುಕಿ ಕೊಂದ ಪ್ರೇಮಿಯೊಬ್ಬ ಪೊಲೀಸರ ಮುಂದೆ ಶರಣಾಗಿರುವ ಘಟನೆಯೊಂದು ಮುಂಬೈನ ಕಾಲಚೌಕಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.

26 ವರ್ಷದ ಪ್ರಸಾದ್ ಸಾವಂತ್ ಎಂಬ ಯುವಕ ಕೊಲೆಯ ಆರೋಪಿಯಾಗಿದ್ದಾನೆ. ನೆರೆ ಮನೆಯ ನಿವಾಸಿಯಾಗಿದ್ದ ಎಕ್ತಾ ತಲ್ವಾಡ್ಕರ್ (24) ಯುವತಿಯೊಂದಿ ಪ್ರಸಾದ್ ಸಾವಂತ್ ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದ. ಇತ್ತೀಚೆಗಷ್ಟೇ ಯುವತಿ ಪ್ರಸಾದ್ ಸಾವಂತ್ ನೊಂದಿಗೆ ಮದುವೆಯಾಗುವ ಇಚ್ಛೆಯನ್ನು ಮನೆಯವರೊಂದಿಗೆ ವ್ಯಕ್ತಪಡಿಸಿದ್ದಾಳೆ. ಆದರೆ, ಪೋಷಕರು ನಿರಾಕರಿಸಿದ್ದರು. ಹೀಗಾಗಿ ಪ್ರೇಮಿಗಳಿಬ್ಬರು ನೊಂದು ಆತ್ಮಹತ್ಯೆಗೆ ಶರಣಾಗಲೆಂದು ನಿರ್ಧಾರಕ್ಕೆ ಬಂದಿದ್ದರು.

ತಮ್ಮ ನಿರ್ಧಾರಂತೆ ಯುವತಿ ಪ್ರೇಮಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾಲಚೌಕಿ ಪ್ರದೇಶದ ದೀಪಕ್ ಜ್ಯೋತಿ ಸೊಸೈಟಿ ಬಳಿ ಬಂದಿದ್ದಳು. ಆದರೆ, ಈ ವೇಳೆ ಮನಸ್ಸು ಬದಲಿಸಿಕೊಂಡಿದ್ದ ಯುವಕ, ಯುವತಿ ಬಂದ ಕೂಡಲೇ ತನ್ನ ಬಳಿಯಿದ್ದ ಚೂರಿಯಿಂದ ಯುವತಿಯ ಕುತ್ತಿಗೆಗೆ ಇರಿದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದಾಗಿ ಹೇಳಿ, ಪೊಲೀಸರಿಗೆ ಶರಣಾಗಿದ್ದಾನೆ. ಯುವಕ ನೀಡಿದ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಷ್ಟರಲ್ಲಿ ಯುವತಿ ಸಾವನ್ನಪ್ಪಿದ್ದಾಳೆ.

ಯುವತಿ ಹತ್ಯೆ ಮಾಡಲು ಈ ಮೊದಲೇ ಸಂಚು ರೂಪಿಸಿದ್ದು, ಕಳೆದ 15 ದಿನಗಳಿಂದಲೂ ಚಾಕುವೊಂದನ್ನು ಪ್ರಸಾದ್ ಸಾವಂತ್ ಇಟ್ಟುಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com