ರು. 3,999ಕ್ಕೆ ಹೋಗಿ ಬ್ಯಾಂಕಾಕ್‍ಗೆ

ನಾಲ್ಕು ಸಾವಿರದಲ್ಲಿ ಥಾಯ್ಲೆಂಡ್ ನೋಡುವ ಆಸೆ ಇದ್ದರೆ, ವಿಮಾನದಲ್ಲೇ ಸಂಸ್ಥೆಯು ಬೆಂಗಳೂರಿನಿಂದ ಬ್ಯಾಂಕಾಕ್ ಗೆ ನೇರ ವಿಮಾನ ಸೌಲಭ್ಯ...
ಥಾಯ್ ಏರ್ ಏಷ್ಯಾ
ಥಾಯ್ ಏರ್ ಏಷ್ಯಾ

ಬೆಂಗಳೂರು: ನಾಲ್ಕು ಸಾವಿರದಲ್ಲಿ ಥಾಯ್ಲೆಂಡ್ ನೋಡುವ ಆಸೆ ಇದ್ದರೆ, ವಿಮಾನದಲ್ಲೇ ಸಂಸ್ಥೆಯು ಬೆಂಗಳೂರಿನಿಂದ ಬ್ಯಾಂಕಾಕ್ ಗೆ ನೇರ ವಿಮಾನ ಸೌಲಭ್ಯ ಆರಂಭಿಸಿದ್ದು, ಇದರ ಅಂಗವಾಗಿ ವಿಶೇಷ ರಿಯಾಯಿತಿ ಪ್ರಕಟಿಸಿದೆ. ಕೇವಲ ರು. 3,999 ನೀಡಿದರೆ, ಬ್ಯಾಂಕಾಂಕ್‍ಗೆ ವಿಮಾನದಲ್ಲಿ ಸೀಟ್ ಕಾಯ್ದಿರಿಸಬಹುದು.

ಸೆಟ್ಪೆಂಬರ್ 1ರಿಂದ ಶುರು: ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಥಾಯ್ ಏರ್ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಸ ಪಾನ್ ಬಿಜ್ಲೆವೆಲ್ಡ್, ರು. 3,999 ಆರಂಭವಾಗುವ ಅತ್ಯಂತ ಕಡಿಮೆ ಮತ್ತು ಆಕರ್ಷಕ ಟಿಕೆಟ್ ದರದೊಂದಿಗೆ ಥಾಯ್ ಏರ್ ಏಷ್ಯಾವು ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ವಿಮಾನ ಸೇವೆ ಆರಂಭಿಸುತ್ತಿದ್ದು, ಅದರಂತೆ 2015 ರ ಸೆ.1ರಿಂದ 2016ರ ಆ.31ರವರೆಗೆ ಪ್ರಯಾಣಿಸಲು ಅವಕಾಶವಿದೆ. ಆದರೆ, ಬುಕಿಂಗ್‍ಗೆ ಇದೇ ಜು. 5ರವರೆಗೆ ಮಾತ್ರ ಅವಕಾಶ.

ಹೆಚ್ಚಿನ ಮಾಹಿತಿಗೆ airasia.com ವೆಬ್ ಸೈಟ್ ವೀಕ್ಷಿಸಬಹುದೆಂದು ಹೇಳಿದರು. ಪ್ರಯಾಣ ದರ ಒಂದು ಮಾರ್ಗದ ಪ್ರಯಾಣಕ್ಕೆ ಮಾತ್ರ ಅನ್ವಯ. ಏರ್ ಪೋರ್ಟ್ ತೆರಿಗೆ, ಶುಲ್ಕಗಳೂ ಸೇರಿವೆ. ಬುಧವಾರ, ಶನಿವಾರ ಹೊರತು ಪಡಿಸಿ ಉಳಿದ 5 ದಿನ ರಾತ್ರಿ 11.45ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ ಬೆಳಗ್ಗೆ 5ಕ್ಕೆ ಬ್ಯಾಂಕಾಕ್‍ನ ಡಾನ್ ಮುವಾಂಗ್ ತಲುಪಲಿದೆ. ಸಾಮಾನ್ಯ ದರಕ್ಕಿಂತ ಈ ರಿಯಾಯ್ತಿ ದರ ಶೇ.15ರಿಂದ 20 ಕಡಿಮೆ ಇದೆ ಎಂಬುದು ಸಂಸ್ಥೆಯ ವಿವರಣೆ. ಸೋಮವಾರ ಏರ್ ಏಷ್ಯಾ ಖಾಸಗಿ ವಿಮಾನಯಾನ ಕಂಪನಿಯ ನೂತನ ಸೇವೆ ಉದ್ಘಾಟನೆ ವೇಳೆ ಥಾಯ್ಲೆಂಡ್‍ನ ಕಲಾವಿದರು ಪ್ರದರ್ಶನ ನೀಡಿದರು.

ಸಂಚಾರ ಹೆಚ್ಚಳದ ನಿರೀಕ್ಷೆ
2015ರ ಸೆ. 1ರಿಂದ ಬೆಂಗಳೂರು ಮತ್ತು ಬ್ಯಾಂಕಾಕ್ ನಡುವೆ ನೇರ ವಿಮಾನಯಾನ ಸೌಲಭ್ಯ ಆರಂಭಿಸುತ್ತಿದ್ದು, ವಾರದಲ್ಲಿ ನಮ್ಮ ಸಂಸ್ಥೆಯ 5 ವಿಮಾನಗಳು ಸಂಚರಿಸಲಿವೆ. ದಕ್ಷಿಣ ಏಷ್ಯಾದ ಥೈಲ್ಯಾಂಡ್ ಮತ್ತು ಇತರ ದೇಶಗಳೊಂದಿಗೆ ಸಂಪರ್ಕ ಸಾಧಿಸಲು ಬಯಸುವ ಕೊಚ್ಚಿ, ಗೋವಾ, ಪುಣೆ, ಜೈಪುರ, ಚಂಡೀಗಡ, ನವದೆಹಲಿ, ವಿಶಾಖಪಟ್ಟಣಂನ ಪ್ರಯಾಣಿಕರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಪ್ರವಾಸ ಮಾಡಬಹುದು ಎಂದರು ತಾಸಪಾನ್.

ಕಳೆದ ವರ್ಷ ಬ್ಯಾಂಕಾಕ್‍ಗೆ 9.4 ಲಕ್ಷ ಭಾರತೀಯರು ಪ್ರಯಾಣ ಮಾಡಿದ್ದು ಇದರಲ್ಲಿ 1.25 ಲಕ್ಷ ಮಂದಿ ಬೆಂಗಳೂರಿನಿಂದ ಸಂಚರಿಸಿದ್ದಾರೆ. ನೂತನ ಸೇವೆಯಿಂದ ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಇದೆ ಎಂದರು. ನೂತನ ಯೋಜನೆ ಘೋಷಿಸುವ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ, ಸರ್ಕಾರ ಇ- ಆಡಳಿತ ಇಲಾಖೆ ಸಿಇಓ ರತನ್ ಕೇಲ್ಕರ್ ಮತ್ತಿತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com