

ಕರ್ನಾಟಕದ ಯುವ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ರಾಜಕೀಯ ಸವಾಲುಗಳನ್ನು ಎದುರಿಸಿ ಕೋಲಾರ ಜಿಲ್ಲೆಯಲ್ಲಿ ಭೂ ಮತ್ತು ಮರಳು ಮಾಫಿಯಾ ವಿರುದ್ಧ ಸಮರ ಸಾರಿ ಗೆದ್ದಿದ್ದರು. ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ತೆರಿಗೆ ವಂಚಿಸುತ್ತಿದ್ದ ಹಲವು ದೊಡ್ಡ ಕಂಪನಿಗಳಿಗೆ ಬಿಸಿ ಮುಟ್ಟಿಸು ತ್ತಿದ್ದರು. ಹಾಗಿದ್ದರೆ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ಕೆಲಸಕ್ಕೆ, ಕರ್ತವ್ಯಕ್ಕೆ ಬೆಲೆಯೇ ಇಲ್ಲವೇ? ದೇಶಾದ್ಯಂತ ಮತ್ತು ಕರ್ನಾಟಕದಲ್ಲಿ ಕರ್ತವ್ಯದಲ್ಲಿದ್ದಾಗ ಹಲ್ಲೆಗೆ ಒಳಗಾದ ಮತ್ತು ಪ್ರಾಣವನ್ನೇ ಕಳಕೊಂಡವರ ಬಗ್ಗೆ ಇಲ್ಲಿದೆ ಮಾಹಿತಿ.
ದುರ್ಗಾಶಕ್ತಿ ನಾಗ್‍ಪಾಲ್
ಮರಳು ಮಾಫಿಯಾ , ಅಕ್ರಮ ಗಣಿಗಾರಿಕೆ ವಿರುದ್ಧ ದಿಟ್ಟ ಹೋರಾಟ ಮಾಡುತ್ತಿದ್ದ ಮಹಿಳಾ ಅಧಿಕಾರಿ. 2013ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣ ಹಂತದಲ್ಲಿದ್ದ
ಮಸೀದಿಯನ್ನು ಕೆಡವಿ ಹಾಕಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಯಿತು.
ದೇಶಾದ್ಯಂತ ಪ್ರತಿರೋಧ ಉಂಟಾದ ಬಳಿಕ ಉ.ಪ್ರ.ಸರ್ಕಾರ ಸಸ್ಪೆಂಡ್ ಆದೇಶ ಹಿಂಪಡೆಯಿತು.
ಯೂನುಸ್ ಖಾನ್
ಹಿಮಾಚಲ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಫಿಯಾ ವಿರುದ್ಧ ಸಿಡಿದೆದ್ದ ಯೂನುಸ್ ಖಾನ್ ದುರ್ಗಾಶಕ್ತಿ ನಾಗಪಾಲ್ ಬ್ಯಾಚ್‍ಮೇಟ್. ಅಕ್ರಮ ಗಣಿಗಾರಿಕೆ ನಡೆಸಿ,
ಕಲ್ಲುಗಳನ್ನು ಸಾಗಿಸುತ್ತಿದ್ದಾಗ ಹಲವಾರು ಬಾರಿ ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಕ್ರಮ ಗಣಿಗಾರಿಕೆಯ ಪ್ರಮುಖರು 2013ರ ಆಗಸ್ಟ್‍ನಲ್ಲಿ ಅವರ
ಮೇಲೆ ದಾಳಿ ನಡೆಸಲಾಯಿತು. ಜಲ್ಲಿಕಲ್ಲುಗಳನ್ನು ಸುರಿದು ಅವರನ್ನು ಹತ್ಯೆ ಮಾಡುವ ಸಂಚನ್ನು ಅಕ್ರಮ ಗಣಿಗಾರಿಕೆ ನೇತಾರರು ಮಾಡಿದ್ದರು.
ಎಚ್.ಎಲ್. ನಾಗರಾಜ್
ನಾಗಮಂಗಲ, ಹೊಳೆನರಸೀಪುರದ ಮರಳು ಮಾಫಿಯಾ ವಿರುದ್ಧ ಸಿಡಿದೆದ್ದಿದ್ದ ಕೆಎಎಸ್ ಅಧಿಕಾರಿ ಎಚ್. ಎಲ್. ನಾಗರಾಜ್. ಅವರ ಮೇಲೆ ಲಾರಿ ಹರಿಸಿ ಕೊಲೆ ಮಾಡುವ ಯತ್ನ ನಡೆದಿತ್ತು.
ಆಶಿಶ್ ಕುಮಾರ್
ಟ್ಯುಟಿಕಾರಿನ್‍ನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ನಾಗರಿಕರಿಗೆ ತೀವ್ರ ತಲೆನೋವು ತಂದಿತ್ತು. ಈ ಕುರಿತು ಹಲವಾರು ಬಾರಿ ಮನವಿ ಮÁಡಿದ್ದರೂ ಯÁವುದೇ
ಪ್ರಯೋಜನವಾಗಿ ರಲಿಲ್ಲ. ಇದನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು ಆಶಿಶ್ ಕುಮಾರ್. ಆದರೆ ಇವರನ್ನು ತಡೆದದ್ದು, ಮರಳು ಕುಳಗಳಲ್ಲ, ಬದಲಾಗಿ
ಸರ್ಕಾರ. ಅವರನ್ನು ಚೆನ್ನೈನ ಮಧ್ಯಾಹ್ನದ ಊಟದ ಯೋಜನೆಗೆ ಮುಖ್ಯ ಕಾರ್ಯದರ್ಶಿಯನ್ನಾಗಿ ಕಾರ್ಯ ನಿರ್ವಹಿಸಲುವರ್ಗಾಯಿಸಿತು.
ಮಹಾಂತೇಶ್ ಎಸ್.ಪಿ
ಸಹಕಾರ ಸಂಘಗಳ ಇಲಾಖೆ ಲೆಕ್ಕಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಂತೇಶ್, ಹಲವಾರು ತೆರಿಗೆ ವಂಚಕರಿಗೆಸಿಂಹಸ್ವಪ್ನವಾಗಿದ್ದರು. ಗೃಹ ನಿಮರ್Áಣ ಸಹಕಾರ ಸಂಘಗಳ
ಲೆಕ್ಕ ಪರಿಶೋಧನೆ ನಡೆಸಿದ್ದೇ ಅವರ ಜೀವಕ್ಕೆ ಎರವಾಯಿತು. 2012ರ ಮೇನಲ್ಲಿ ಬೆಂಗಳೂರಿನ ಏಟ್ರಿಯಾ ಹೋಟೆಲ್ ಬಳಿ
ಅವರ ಮೇಲೆ ತೀವ್ರ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಲಾಯಿತು.
ಮದನ್ ನಾಯಕ್
ದಾಂಡೇಲಿಯಲ್ಲಿ ಎಸಿಎಫ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2012ರ ಮೇ 9ರಂದು ಮೊಸಳೆ ಪಾರ್ಕ್ ಗೆ ಬಂದಿದ್ದ ಪ್ರವಾಸಿಗರಿಗೆ ಬುದಿಟಛಿ ಹೇಳಿದ್ದೇ ತಪ್ಪಾಯಿತು.ಕಾಳಿ ನದಿ ಬಳಿ ಇರುವ ಮೊಸಳೆಗಳಿಗೆ ಮಾಂಸವನ್ನು ಎಸೆಯುತ್ತಿದ್ದ ಮಂದಿಗೆ, ಆ ರೀತಿ ಮಾಡಬೇಡಿ ಎಂದು ಹೇಳಿದ್ದು ವಾಗ್ವಾದಕ್ಕೆ ಕಾರಣವಾಗಿ ಅವರ ಮೇಲೆ ಸುಮಾರು16 ಮಂದಿ ಪ್ರವಾಸಿಗರು ಹಲ್ಲೆ ನಡೆಸಿದರು. ಧಾರವಾಡ ಆಸ್ಪತ್ರೆಯಲ್ಲಿ ಅವರು ಗೋಣು ಚೆಲ್ಲಿದ್ದರು.
ಯು.ವಿ. ಸಿಂಗ್
2008ರಲ್ಲಿ ಬಳ್ಳಾರಿ ಬಳಿ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ತೆರಳಿದ್ದ ಯು.ವಿ. ಸಿಂಗ್ ಅವರರ ಕೊಲೆ ಯತ್ನ ನಡೆದಿತ್ತು.ಇದರ ನಂತರ 2010ರಲ್ಲಿ ಬೆಂಗಳೂರಿನ ನಾಗವಾರ ಕೆರೆ
ಸಮೀಪ ತ್ಯಾಜ್ಯ ಸುರಿಯುತ್ತಿದುದನ್ನು ಪ್ರಶ್ನಿಸಿದ್ದಕ್ಕೆ ಮತ್ತೆ ಹಲ್ಲೆ ಯತ್ನ.
ಸವಿತಾ ಹೂಗಾರ್
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮರಳು ಮಾಫಿಯಾ ತಡೆಯಲು ಯತ್ನಿಸಿದ್ದ ಡಿವೈಎಸ್‍ಪಿ. 2014ರ ಸೆ.2ರಂದು ಅವರ ಮೇಲೆ ಲಾರಿ ಹರಿಸಿ ಕೊಲೆ ಮಾಡಲು ಯತ್ನ. ನಂತರ ಅದನ್ನು ಅಕಸ್ಮಿಕವಾಗಿ ಅಪಘಾತ ಉಂಟಾಯಿತು ಎಂದು ಬಿಂಬಿಸಲು ಯತ್ನ.
ಎಸ್. ಮಂಜುನಾಥ್
ಕರ್ನಾಟಕದ ಕೋಲಾರದ ಎಸ್. ಮಂಜುನಾಥ್ ಉತ್ತರಪ್ರದೇಶದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಉದ್ಯೋಗಿಯಾಗಿದ್ದರು. ಸಂಸ್ಥೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ತೈಲ ಕಲಬೆರಕೆ ದಂಧೆಯನ್ನು ಬಯಲಿಗೆಳೆದಿದ್ದೇ ಇವರ ಜೀವಕ್ಕೆ ಮುಳುವಾಯಿತು. 2005ರ ನ.19ರಂದು ಕಲಬೆರಕೆ ನಡೆಯುತ್ತಿದ್ದ ಪೆಟ್ರೋಲ್ ಪಂಪ್‍ಗೆ
ಆಗಮಿಸಿದೊಡನೆ 27 ವರ್ಷದ ಮಂಜುನಾಥ್ ಅವರನ್ನು ಗುಂಡಿಕ್ಕಿ ಸಾಯಿಸಲಾಯಿತು.