
ಪಟನಾ: ಮುನ್ನಾ ಭಾಯ್ ಸ್ಟೈಲಲ್ಲಿ ಪರೀಕ್ಷೆಯಲ್ಲಿ ನಕಲು ಮಾಡೋದು ಒಲ್ಡ್ ಸ್ಟೈಲ್. ಈಗೇನಿದ್ದರೂ ಹೊಸತು.
ಬಿಹಾರದಾದ್ಯಂತ ನಡೆಯುತ್ತಿರುವ 10ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡಲು ಹೊಸ ಶೈಲಿ ಅನುಸರಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು ನಕಲಿಗೆ ಅನುಕೂಲ ಮಾಡಿಕೊಡುವುದು ಗೊತ್ತು.
ಇದೀಗ ಪೊಷಕರೇ ಅಂಥ ಕೆಲಸಕ್ಕೆ ಮುಂದಾಗಿದ್ದಾರೆ. ಬಿಹಾರದ ರಾಜಿಪುರದಲ್ಲಿ ಇಂಥ ಘಟನೆ ನಡೆದಿದೆ. ಶಾಲೆಯ ಗೋಡೆ ಹತ್ತಿ ಚೀಟಿ, ಪುಸ್ತಕಗಳನ್ನು ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಮಾಹಿತಿ ಸಿಕ್ಕಿ ಶಾಲೆಗೆ ದಾಳಿ ಮಾಡಿದ ವಿಚಕ್ಷಣಾ ದಳ ದಂಗು ಬಡಿದು ಹೋಯಿತು.
ಕಾರ್ಯಾಚರಣೆ ನಡೆಸಿ 600 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದೆ. ಗಮನಾರ್ಹ ಅಂಶವೆಂದರೆ ಶಿಕ್ಷಣ ಸಚಿವ ಪಿ.ಕೆ ಸಾಹು ಸಾಮೂಹಿಕ ನಕಲು ತಡೆಗಟ್ಟಲು ಸರ್ಕಾರಕ್ಕೆ ಅಸಾಧ್ಯವಾಗಿದೆ. ಹೆತ್ತವರು ಮಕ್ಕಳಿಗೆ ಇಂತ ಕೃತ್ಯಗಳಿಗೆ ಪ್ರೇರೇಪಣೆ ಕೊಡುವುದರ ಬದಲು ತಿಳಿಹೇಳಬೇಕೆಂದಿದ್ದಾರೆ.
Advertisement