
ಪ್ಯಾರಿಸ್: ಸುಮಾರು 148 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಜರ್ಮನ್ ಏರ್ ಲೈನ್ ಸಂಸ್ಥೆಗೆ ಸೇರಿದ ವಿಮಾನವೊಂದು ದಕ್ಷಿಣ ಫ್ರಾನ್ಸ್ ನಲ್ಲಿ ಪತನವಾಗಿದ್ದು, ವಿಮಾನದಲ್ಲಿ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜರ್ಮನ್ ಏರ್ ಲೈನ್ ಸಂಸ್ಥೆಯ ಏರ್ ಬಸ್ A320 ವಿಮಾನವು ದುರಂತಕ್ಕೀಡಾಗಿದ್ದು, ವಿಮಾನದಲ್ಲಿ 142 ಮಂದಿ ಪ್ರಯಾಣಿಕರು ಮತ್ತು 2 ಪೈಲಟ್ ಗಳು ಮತ್ತು 4 ಮಂದಿ ಸಿಬ್ಬಂದಿಗಳು ಇದ್ದರು. ಬಾರ್ಸಿಲೋನಾ ಮತ್ತು ಡಸೆಲ್ ಡಾರ್ಫ್ ನಡುವೆ ಪ್ರಯಾಣಿಸುತ್ತಿದ್ದ ಈ ವಿಮಾನವು ಫ್ರೆಂಚ್ ಆಲ್ಪ್ಸ್ ಪರ್ವತ ಶ್ರೇಣಿಯ ಸಮೀಪದ ಡಿಗ್ನೆ ಎಂಬಲ್ಲಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 174 ಮಂದಿ ಪ್ರಯಾಣಿಕರನ್ನು ಹೊತ್ತಯ್ಯಬಲ್ಲ ಈ ವಿಮಾನದ ಪತನಕ್ಕೆ ಕಾರಣಗಳೇನು ಎಂದು ತಿಳಿದುಬಂದಿಲ್ಲ.
ಅಪಘಾತಕ್ಕೀಡಾದ ಎ 320 ವಿಮಾನವು ಜರ್ಮನ್ ಮೂಲದ ಲಫ್ತಾನ್ಸಾ ಏರ್ ವಿಂಗ್ಸ್ ಮಾಲೀಕತ್ವಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗುತ್ತಿದೆ.
ಹೆಚ್ಚಿನ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.
Advertisement