ಬೆಳ್ಳಗಿದ್ದರಿಂದಲೇ ಸೋನಿಯಾ 'ಕೈ' ಅಧ್ಯಕ್ಷರಾದರು: ಗಿರಿರಾಜ್ ಸಿಂಗ್

ರಾಜೀವ್ ಗಾಂಧಿ ನೈಜೀರಿಯಾ ಮಹಿಳೆಯನ್ನೇನಾದರೂ ವಿವಾಹಗಿದ್ದರೆ ಅಥವಾ ಸೋನಿಯಾ ಗಾಂಧಿಯವರು ಬೆಳ್ಳಗಿರದಿದ್ದರೆ ಕಾಂಗ್ರೆಸ್ ಪಕ್ಷ ಸೋನಿಯಾ ಅವರನ್ನು ಅಧ್ಯಕ್ಷೆಯಾಗಿ ಒಪ್ಪಿಕೊಳ್ಳುತ್ತಿರಲಿಲ್ಲ...
ಬಿಜೆಪಿ ಸಂಸದ ಗಿರಿರಾಜ್ ಸಿಂಗ್
ಬಿಜೆಪಿ ಸಂಸದ ಗಿರಿರಾಜ್ ಸಿಂಗ್
Updated on: 

ನವದೆಹಲಿ: ರಾಜೀವ್ ಗಾಂಧಿ ನೈಜೀರಿಯಾ ಮಹಿಳೆಯನ್ನೇನಾದರೂ ವಿವಾಹಗಿದ್ದರೆ ಅಥವಾ ಸೋನಿಯಾ ಗಾಂಧಿಯವರುಬೆಳ್ಳಗಿರದಿದ್ದರೆ ಕಾಂಗ್ರೆಸ್ ಪಕ್ಷ ಸೋನಿಯಾ ಅವರನ್ನು ಅಧ್ಯಕ್ಷೆಯಾಗಿ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ಬುಧವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಗಿರಿರಾಜ್ಸಿಂಗ್, ರಾಜೀವ್ ಗಾಂಧಿ ಅವರು ನೈಜೀರಿಯಾಗೆ ಸೇರಿದ ಹೆಣ್ಣು ಮಗಳನ್ನು ಮದುವೆಯಾಗಿದ್ದರೆ, ಆ ಹೆಣ್ಣುಮಗಳು ಬೆಳ್ಳಗಿರದಿದ್ದರೆ ಆಕೆಗೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆ ಸ್ಥಾನ ನೀಡುತ್ತಿತ್ತೇ
?
ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಗಿರಿರಾಜ್ಸೃಷ್ಟಿಸಿದ್ದಾರೆ.


ಸಂಸದರ ವಿವಾದಾತ್ಮಕ ಹೇಳಿಕೆಗಳಿಂದ ಈಗಷ್ಟೇ ಕೊಂಚನಿರಾಳವಾಗಿದ್ದ ಬಿಜೆಪಿ ಪಕ್ಷಕ್ಕೆ ಗಿರಿರಾಜ್ ಅವರ ಹೇಳಿಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಅವರು ರ್ಯಾಲಿ ಕೈಗೊಂಡಿದ್ದ ವೇಳೆ ನರೇಂದ್ರಮೋದಿ ಅವರನ್ನು ಯಾರು ವಿರೋಧಿಸುತ್ತಾರೆಯೋ ಅಂತಹ ವ್ಯಕ್ತಿಗೆ ಭಾರತದಲ್ಲಿ ಸ್ಥಾನವಿಲ್ಲ.ಪಾಕಿಸ್ತಾನಕ್ಕೆ ಹೋಗಿ ಬದುಕಿ ಎಂದು ಹೇಳುವ ಮೂಲಕ ದೊಡ್ಡ ವಿವಾದವನ್ನು ಸೃಷ್ಟಿಸಿದ್ದರು.

ಇದಲ್ಲದೆ ಇತ್ತೀಚಗಷ್ಟೇ ಖಾಸಗಿ ಮಾಧ್ಯಮವೊಂದರಸಂದರ್ಶನದ ವೇಳೆ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾರೆ ಎಂದು ಒಂದು ಕ್ಷಣಅಂದುಕೊಳ್ಳೋಣ, ಪ್ರಧಾನಿಮಂತ್ರಿಯಾಗಿ ಅಧಿಕಾರದಲ್ಲಿದ್ದ ರಾಹುಲ್ ಗಾಂಧಿ ಅವರು 43ರಿಂದ 47 ದಿನಕಾಣೆಯಾದರೆ ದೇಶದ ಕಥೆ ಏನಾಗುತ್ತದೆ?...ಕೇಂದ್ರ ಬಜೆಟ್ ಮಂಡನೆ ಏನಾಗಬೇಕಿತ್ತು..? ಇದೊಂದು ರೀತಿ ಮಲೇಷ್ಯಾ ಏರ್ ಲೈನ್ಸ್ ಕಾಣೆಯಾದ ಪ್ರಕರಣದಂತೆ ಆಗಿದೆ. ಈಗಲೂ ವಿಮಾನಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ.

ಕಾಂಗ್ರೆಸ್ ಕಥೆಯೂ ಹೀಗೆ ಆಗಿದೆ. ಕಾಂಗ್ರೆಸ್ ಪ್ರತಿಪಕ್ಷವಾಗಿದ್ದರೂ ಬಜೆಟ್ ಮಂಡನೆ ವೇಳೆ ಉಪಾಧ್ಯಕ್ಷರೇ ಕಾಣೆಯಾಗಿದ್ದಾರೆ. ಆದರೆ ಅವರು ಎಲ್ಲಿಹೋಗಿದ್ದಾರೆ ಎಂಬುದು ಅವರ ಪಕ್ಷದ ಸಂಸದರಿಗೆ ತಿಳಿದಿಲ್ಲ ಎಂದು ಹೇಳಿದ್ದರು. ಗಿರಿರಾಜ್ ಅವರ ಈಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಸಂಸದರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com