ಕಾರ್ಟೂನ್ ಸ್ಪರ್ಧೆ ವೇಳೆ ಗುಂಡಿನ ದಾಳಿ; ಇಬ್ಬರ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ನಡೆಯುತ್ತಿದ್ದ ಪ್ರವಾದಿ ಮಹಮದ್ ಕುರಿತ ಕಲಾ ಸ್ಪರ್ಧೆ ವೇಳೆ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕಲಾ ಮೇಳ ನಡೆದ ಕಟ್ಟಡ
ಕಲಾ ಮೇಳ ನಡೆದ ಕಟ್ಟಡ
Updated on: 

ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ನಲ್ಲಿ ನಡೆಯುತ್ತಿದ್ದ ಪ್ರವಾದಿ ಮಹಮದ್ ಕುರಿತ ಕಲಾ ಸ್ಪರ್ಧೆ ವೇಳೆ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಟೆಕ್ಸಾಸ್ ನ ಗಾರ್ಲಾಂಡ್ ನಲ್ಲಿ ಆಯೋಜಿಸಲಾಗಿದ್ದ ಮಹಮದ್ ಆರ್ಟ್ ಎಕ್ಸಿಬಿಷನ್ (ಕಲಾ ಮೇಳ)ಎಂಬ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನೂರಾರು ಕಾರ್ಟೂನಿಸ್ಟ್ ಗಳು ಆಗಮಿಸಿದ್ದರು. ಈ ವೇಳೆ ಕಾರಿನಲ್ಲಿ ಆಗಮಿಸಿದ ಇಬ್ಬರು ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಸರ್ಧೆ ನಡೆಯುತ್ತಿದ್ದ ಕಟ್ಟಡದೊಳಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಮಳೆ ಸುರಿಸಿದ್ದಾರೆ. ಅಲ್ಲದೆ ಇಡೀ ಕಟ್ಟಡವನ್ನು ಒತ್ತೆಯಾಳುಗಳಾಗಿರಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಗೆ ಗಾಯವಾಗಿದ್ದು, ಆತನ ಕಾಲಿಗೆ ಗುಂಡೇಟು ತಗುಲಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ತುರ್ತಾಗಿ ಆಗಮಿಸಿದ ಟೆಕ್ಸಾಸ್ ಪೊಲೀಸರು, ದುಷ್ಕರ್ಮಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲದೆ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಗಾರ್ಲಾಂಡ್ ಮೇಯರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಸ್ತುತ ಕಟ್ಟಡವನ್ನು ತಮ್ಮ ವಶಕ್ಕೆ ಪಡೆದಿರುವ ಟೆಕ್ಸಾಸ್ ಪೊಲೀಸರು, ಬೇರೆ ದುಷ್ಕರ್ಮಿಗಳು ಇದ್ದಾರೆಯೇ ಎಂಬುದರ ಕುರಿತು ಮತ್ತು ದುಷ್ಕರ್ಮಿಗಳು ಬಾಂಬ್ ಗಳನ್ನು ಅಳವಡಿಸಿರುವ ಕುರಿತು ಶೋಧ ಕಾರ್ಯ ಆರಂಭಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಕಟ್ಟಡದೊಳಗೆ ಶೋಧ ಕಾರ್ಯ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com