

ನವದೆಹಲಿ: ಕಾನೂನು ಆಯೋಗವನ್ನು ಸರ್ಕಾರದ ಶಾಶ್ವತ ಅಂಗವಾಗಿ ಮಾಡಲು ಶಿಫಾರಸು ಮಾಡಲಾಗಿದೆ. ಕಾನೂನು ವಿಷಯಗಳ ಸಂಕೀರ್ಣತೆಯನ್ನು ಬಗೆಹರಿಸಿಕೊಳ್ಳಲು ಸರ್ಕಾರವು ಇದರ ಸಹಾಯ ಪಡೆಯುತ್ತದೆ.
ಪ್ರಸ್ತುತದಲ್ಲಿ ಕೇಂದ್ರ ಸಚಿವ ಸಂಪುಟವು ಕಾನೂನು ಆಯೋಗವನ್ನು ಪ್ರತಿ ಮೂರು ವರ್ಷಕ್ಕೊಂದು ಬಾರಿ ಮರು ರೂಪಿಸುತ್ತಿದೆ. ಆಯೋಗವು ಪುನರ್ ರಚನೆಯಾದ ಬಳಿಕ ನೂತನ ಅಧ್ಯಕ್ಷ
ಹಾಗೂ ಸದಸ್ಯರನ್ನು ನೇಮಿಸಲಾಗುತ್ತದೆ. ಈ ಬಗ್ಗೆ ಕಾನೂನು ಸಚಿವಾಲಯವು ಸಂಸತ್ತಿಗೆ ಶಿಫಾರಸನ್ನು ಮಾಡಿದೆ.