ಛತ್ತೀಸ್‌ಘಡ: ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸ್ ಸೇರಿ ನಾಲ್ವರ ಸಾವು

ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಭಾರೀ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರು ಹಾಗೂ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ.
ಗುಂಡಿನ ಕಾಳಗ(ಸಾಂದರ್ಭಿಕ ಚಿತ್ರ)
ಗುಂಡಿನ ಕಾಳಗ(ಸಾಂದರ್ಭಿಕ ಚಿತ್ರ)

ರಾಯ್‌ಪುರ: ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಭಾರೀ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರು ಹಾಗೂ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ.

ಛತ್ತೀಸ್‌ಘಡದ ಬಿಜಾಪುರ ಜಿಲ್ಲೆಯ ದಟ್ಟಾರಣ್ಯದಲ್ಲಿ ಮಿಥುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಕೂಂಬಿಂಗ್‌ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೃತ ಪೊಲೀಸರಲ್ಲಿ ಒಬ್ಬರು ವಿಶೇಷ ಕಾರ್ಯಪಡೆ ಸಿಬ್ಬಂದಿ ಹಾಗೂ ಇನ್ನೊಬ್ಬರು ಜಿಲ್ಲಾ ಪೊಲೀಸ್‌ ಸಿಬ್ಬಂದಿ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com