

ಶ್ರೀನಗರ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಗಡಿಭಾಗ ಮತ್ತು ಕಣಿವೆ ರಾಜ್ಯದ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಸೇನಾ ಮುಖ್ಯಸ್ಥ, ದಲ್ ಬೀರ್ ಸಿಂಗ್, ಹಿರಿಯ ಅಧಿಕಾರಿಗಳಾದ ಡಿಎಸ್ ಹೂಡಾ ಸಚಿವರಿಗೆ ಸಾಥ್ ನೀಡಿದ್ದಾರೆ. ಜಮ್ಮು ಕಾಶ್ಮೀರದ ನರ್ಬಾ, ಲಡಾಕ್, ಶ್ರೀನಗರದ ಲೇಹ್ ಪ್ರದೇಶಗಳಲ್ಲಿ ಭದ್ರತೆ ಬಗ್ಗೆ ಪರಿಶೀಲಿಸಲಿದ್ದಾರೆ. ಇನ್ನು ಸಿಯಾಚಿನ್ ಪ್ರದೇಶದಲ್ಲಿ ಮನೋಹರ್ ಪರಿಕ್ಕರ್ ವೈಮಾನಿಕ ಸಮೀಕ್ಷೆ ಕೂಡ ನಡೆಸಿದರು.
ಲೆಫ್ಟಿನೆಂಟ್ ಜನರಲ್ ವಿ.ಎಸ್ ನೇಗಿ, ಪಾಕಿಸ್ತಾನ ಗಡಿ ರೇಖೆ, ಚೀನಾ ಗಡಿ ರೇಖೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ನಂತರ ಶ್ರೀನಗರಕ್ಕೆ ತೆರಳುವ ಪರಿಕ್ಕರ್ ಮುಖ್ಯಮಂತ್ರಿ ಮುಫ್ತಿ ಮಹಮದ್ ಸಯ್ಯಿದ್, ಹಾಗೂ ರಾಜ್ಯಪಾಲ ಎನ್ ಎನ್ ವೊಹ್ರಾ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಇದಾದ ನಂತರ ಮನೋಹರ್ ಪರಿಕ್ಕರ್ ಪೂಂಚ್ ಗೆ ಭೇಟಿ ನೀಡಿ ಅಲ್ಲಿನ ಸೆಕ್ಯೂರಿಟಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಕ್ಷಣಾ ಸಚವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಮ್ಮು ಕಾಶ್ಮೀರಕ್ಕೆ ಮನೋಹರ್ ಪರಿಕ್ಕರ್ 2ನೇ ಭಾರಿ ಭೇಟಿ ನೀಡಿದ್ದಾರೆ.