ಜಲಸಂಪನ್ಮೂಲ, ಸಂಸ್ಕೃತಿ ಸಂಬಂಧಿತ ಎರಡು ಎಂಒಯು ಗಳಿಗೆ ಭಾರತ-ಚೀನಾ ಸಹಿ

ಭಾರತ ಹಾಗೂ ಚೀನಾ ಜಲಸಂಪನ್ಮೂಲ ಮತ್ತು ಸಂಸ್ಕೃತಿ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ತಿಳಿವಳಿಕೆ ಪತ್ರ(ಎಂಒಯು) ಗಳಿಗೆ ಸಹಿ ಹಾಕಿವೆ.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ- ಚೀನಾ ಉಪಾಧ್ಯಕ್ಷ  ಲಿ ಯುವಾಚೊ
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ- ಚೀನಾ ಉಪಾಧ್ಯಕ್ಷ ಲಿ ಯುವಾಚೊ

ನವದೆಹಲಿ: ಭಾರತ ಹಾಗೂ ಚೀನಾ ಜಲಸಂಪನ್ಮೂಲ ಮತ್ತು ಸಂಸ್ಕೃತಿ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ತಿಳಿವಳಿಕೆ ಪತ್ರ(ಎಂಒಯು) ಗಳಿಗೆ ಸಹಿ ಹಾಕಿವೆ.
ಚೀನಾ ಉಪಾಧ್ಯಕ್ಷ ಲಿ ಯುವಾಚೊ ಭಾರತಕ್ಕೆ ಭೇಟಿ ನೀಡಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ- ಚೀನಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಯಾಗಿದ್ದು, ಭಾರತ-ಚೀನಾ ಉಪರಾಷ್ಟ್ರಪತಿಗಳು ಎರಡು ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಚೀನಾ ಉಪಾಧ್ಯಕ್ಷ ನ.3 ರಂದು ಔರಂಗಾಬಾದ್ ಗೆ ಆಗಮಿಸಿದ್ದು ಕೋಲ್ಕತಾಗೆ ಭೇಟಿ ನೀಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಲಿ ಯುವಾಚೋ ಭೇಟಿ ಮಾಡಲಿದ್ದಾರೆ ಎಂದು ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com