'ಅದು ಗೆಳೆತನ ಅಷ್ಟೇ, ನಿತಿಶ್ ಭೇಟಿಯ ಹಿಂದೆ ರಾಜಕೀಯ ಇಲ್ಲ': ಶತ್ರುಘ್ನ ಸಿನ್ಹಾ

ಒಬ್ಬ ಸ್ನೇಹಿತನಾಗಿ ನಾನು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಭಾರತೀಯ ಜನತಾ...
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
Updated on: 

ಪಾಟ್ನಾ: ಒಬ್ಬ ಸ್ನೇಹಿತನಾಗಿ ನಾನು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಭಾರತೀಯ ಜನತಾ ಪಕ್ಷದ ನಾಯಕ, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ 5ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗುತ್ತಿರುವ ನಿತಿಶ್ ಕುಮಾರ್ ಅವರನ್ನು ಭೇಟಿ ಮಾಡಿ, ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿನ್ಹಾ, 'ಇದೊಂದು ಸ್ನೇಹಯುತ ಭೇಟಿ ಅಷ್ಟೇ, ಭೇಟಿಯ ಹಿಂದೆ ಯಾವುದೇ ರಾಜಕೀಯ ಇಲ್ಲ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಯಾರೂ ರಾಜಕೀಯ ಮಾಡಬಾರದು' ಎಂದಿದ್ದಾರೆ.

ಇದೇ ವೇಳೆ ನಿತಿಶ್ ಕುಮಾರ್ ಅವರನ್ನು ಹಾಡಿ ಹೊಗಳಿದ ಸಿನ್ಹಾ, ಒಬ್ಬ ಯಶಸ್ವಿ ಮುಖ್ಯಮಂತ್ರಿಯನ್ನು ಬಿಹಾರ ಜನತೆ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು ಒಬ್ಬ ಉತ್ತಮ ಸ್ನೇಹಿತನಾಗಿ ಅವರನ್ನು ಅಭಿನಂದಿಸಿದ್ದೇನೆ ಎಂದರು.

ತಾನು ವಿರೋಧಿ ನಾಯಕರನ್ನು ಅಭಿನಂಧಿಸಿದ್ದಕ್ಕಾಗಿ ಪಕ್ಷ ತನ್ನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾದರೆ, ನಾನು ತಡೆಯುವುದಿಲ್ಲ. ನಿತಿಶ್ ಕುಮಾರ್ ಭೇಟಿಯಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದೇನೆ ಎಂದು ತನಗೆ ಅನಿಸುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com