ಭಾರತದಲ್ಲೇ ಫೇಸ್‍ಬುಕ್‍ ಗೆ ಹೆಚ್ಚು ಕಟ್ಟುನಿಟ್ಟು

ಫೇಸ್‍ಬುಕ್‍ನ ವಿಷಯಗಳ ಮೇಲೆ ನಿಬಂಧನೆ ಹಾಕುವುದರಲ್ಲಿ ಭಾರತಕ್ಕೇ ಅಗ್ರಸ್ಥಾನ. ಜನವರಿಯಿಂದ ಜೂನ್‍ವರೆಗೆ ಒಟ್ಟು 15,155 ವಿಷಯಗಳನ್ನು ಸರ್ಕಾರ ಬ್ಲಾಕ್...
ಫೇಸ್‍ಬುಕ್‍
ಫೇಸ್‍ಬುಕ್‍
Updated on
ನವದೆಹಲಿ: ಫೇಸ್‍ಬುಕ್‍ನ ವಿಷಯಗಳ ಮೇಲೆ ನಿಬಂಧನೆ ಹಾಕುವುದರಲ್ಲಿ ಭಾರತಕ್ಕೇ ಅಗ್ರಸ್ಥಾನ. ಜನವರಿಯಿಂದ ಜೂನ್‍ವರೆಗೆ ಒಟ್ಟು 15,155 ವಿಷಯಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. 
ಇದು ಕಳೆದ ವರ್ಷಕ್ಕೆ ಹೋಲಿಸಿದg 3 ಪಟ್ಟು ಹೆಚ್ಚು. ಒಟ್ಟಾರೆ ಜಗತ್ತಿನಲ್ಲಿ 20,568 ವಿಷಯಗಳನ್ನು ಫೇಸ್‍ಬುಕ್‍ನಲ್ಲಿ ನಿಷೇಧಿಸಲಾಗಿದೆ. ಟರ್ಕಿ 4496 ನಿಷೇಧಿತ ವಿಷಯಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. 
ಈ ನಿಷೇಧಗಳಲ್ಲಿ ಕೆಲವು ಸರ್ಕಾರವೇ ಸ್ವಯಂಪ್ರೇರಿತವಾಗಿ ಮಾಡಿಸಿದರೆ, ಹೆಚ್ಚಿನವುಗಳು ಬಳಕೆದಾರರ ವಿನಂತಿಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತವೆ. ಸರ್ಕಾರದ ಮನವಿಗಳಿಗೆ ಫೇಸ್‍ಬುಕ್ ಸ್ಪಂದಿಸುತ್ತಾದರೂ ಬಳಕೆದಾರರ ಪ್ರೈವೆಸಿಯನ್ನು ಕಸಿಯುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com