ಪೊಲೀಸ್ ಕಸ್ಟಡಿಯಲ್ಲಿ ನಕ್ಸಲ್ ಆತ್ಮಹತ್ಯೆ: 5 ಪೊಲೀಸ್ ಅಮಾನತು

2013ರ ಜೈರಾಮ್ ವ್ಯಾಲಿ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಮಾವೋವಾದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
ಆತ್ಮಹತ್ಯೆ
ಆತ್ಮಹತ್ಯೆ

ರಾಯ್ ಪುರ: 2013ರ ಜೈರಾಮ್ ವ್ಯಾಲಿ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಮಾವೋವಾದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಛತ್ತೀಸ್ಗಢ್ ದ ನಾರಾಯಣಪುರ್ ಜಿಲ್ಲೆಯ ಪೊಲೀಸ್ ವಿಚಾರಣ ಠಾಣೆಯಲ್ಲಿದ್ದ 26 ವರ್ಷದ ಬಮನ್ ಅಲಿಯಾಸ್ ದಿನೇಶ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು ಐದು ಮಂದಿ ಪೊಲೀಸರು ಅಮಾನತು ಮಾಡಲಾಗಿದೆ ಎಂದು ನಾರಾಯಣಪುರ ಪೊಲೀಸ್ ಅಧೀಕ್ಷಕರಾದ ಅಭಿಶೇಕ್ ಮೀನಾ ಅವರು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಬಮನ್ ನನ್ನು ಎರಡು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು ಎಂದು ಮೀನಾ ಹೇಳಿದ್ದಾರೆ.

2013ರ ಮೇ 25ರಂದು ಬಸ್ತಾರ್ ನ ಜೈರಾಮ್ ವ್ಯಾಲಿಯಲ್ಲಿ ನಡೆದಿದ್ದ ದಾಳಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಸೇರಿದಂತೆ 31 ಮಂದಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com