

ಇಟಾನಗರ್: ತನ್ನ ಲಿವ್-ಇನ್ ಸಂಗಾತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ ಆರೋಪದ ಮೇಲೆ ಅರುಣಾಚಲ ಪ್ರದೇಶದ ಸ್ಪೀಕರ್ ನಬನ್ ರೆಬಿಯಾ ವಿರುದ್ಧ ಕೇಸು ದಾಖಲಿಸಲಾಗಿದೆ.
ಸ್ಪೀಕರ್ ಸಂಗಾತಿ ಮಹಿಳೆಯೊಬ್ಬರು ಕಳುಹಿಸಿದ ನ್ಯಾಯಾಂಗ ನೋಟಿಸ್ ಗೆ ಉತ್ತರಿಸಲು ವಿಫಲರಾದದ್ದಕ್ಕೆ ಸ್ಪೀಕರ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ರೆಬಿಯಾ ಅವರ ಲಿವ್ಇನ್ ಸಂಗಾತಿಯಾಗಿದ್ದ ಮಹಿಳೆ, ೨೦೧೧ರಿಂದ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಕ್ಕೆ ನಂಬಿಕೆ ದ್ರೋಹ ಮತ್ತು ಮೋಸದ ಆರೋಪ ಹೂಡಿ ಕೇಸು ದಾಖಲಿಸಿದ್ದಾರೆ.
ದೋಯಿಮುಖ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ರೆಬಿಯಾ ಅವರನ್ನು ಐ ಎ ಎನ್ ಎಸ್ ಸಂಪರ್ಕಿಸಲು ಪ್ರಯತ್ನಿಸಿದಾಗ ಪುರುಷರೊಬ್ಬರು ದೂರವಾಣಿ ಕರೆ ಸ್ವೀಕರಿಸಿದರೂ ನಂತರ ಕಡಿತಗೊಳಿಸಿ ಪ್ರಶ್ನೆಗೆ ಉತ್ತರಿಸದೆ ಹೋಗಿದ್ದಾರೆ.
ರೆಬಿಯಾ ಅವರಿಗೆ ವಕಾಲತ್ತು ವಹಿಸಿರುವರ ಪ್ರಕಾರ "ಸ್ಪೀಕರ್ ಈ ಮಹಿಳೆಯ ಮೇಲೆ ಹಲವಾರು ಬಾರಿ ಹಲ್ಲೆ ಮಾಡಿದ್ದಾರೆ" ಮತ್ತು ನಂತರದ ದಿನಗಳಲ್ಲಿ "ಇವರಿಗೆ ಗರ್ಭಪಾತ ಮಾಡಿಕೊಳ್ಳಲು ಕೂಡ ಒತ್ತಡ ಹೇರಿದ್ದಾರೆ" ಎಂದು ದೂರಿದ್ದಾರೆ.
ಸಂತ್ರಸ್ತ ಮಹಿಳೆ, ರೆಬಿಯಾ ಅವರ ಕುಟುಂಬದ ವಿರುದ್ಧ ಕೂಡ ದ್ಯಾವೆ ಹೂಡಿದ್ದಾರೆ.