ವೇತನ ಆಯೋಗ ಕೊನೆಯಾಗಲಿ

ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸುವುದನ್ನು ಸ್ಥಗಿತಗೊಳಿಸಬೇಕೆಂದು ಏಳನೇ ವೇತನ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಕೆ.ಮಾಥುರ್ ಹೇಳಿದ್ದಾರೆ...
ಏಳನೇ ವೇತನ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಮಾಥುರ್ (ಸಂಗ್ರಹ ಚಿತ್ರ)
ಏಳನೇ ವೇತನ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಮಾಥುರ್ (ಸಂಗ್ರಹ ಚಿತ್ರ)

ನವದೆಹಲಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸುವುದನ್ನು ಸ್ಥಗಿತಗೊಳಿಸಬೇಕೆಂದು ಏಳನೇ ವೇತನ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಕೆ.ಮಾಥುರ್ ಹೇಳಿದ್ದಾರೆ.

ಖಾಸಗಿ ವಲಯದಲ್ಲಿ ಪ್ರತಿ ವರ್ಷ ಮಾಡುವಂತೆ ಸರ್ಕಾರಿ ನೌಕರರ ವೇತನವನ್ನೂ ಏಕೆ ಪರಿಷ್ಕರಿಸಬಾರದು ಎಂದು ಪ್ರಶ್ನಿಸಿದ್ದಾರೆ. ವೇತನ ಆಯೋಗ ರಚಿಸುವುದು ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವುದು ಉತ್ತಮ ಮಾನವ ಸಂಪನ್ಮೂಲ ನಿಯಮಗಳಿಗೆ ಅನುಸಾರವಾಗಿ ವೇತನ ನಿಗದಿಪಡಿಸುವುದಕ್ಕಿಂತಲೂ ಹೆಚ್ಚು ರಾಜಕೀಕರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಲೋಕಸಭಾ ಚುನಾವಣೆಗಳು ಮುಂದಿರುವಾಗ ಆಗಿನ ಯುಪಿಎ ಸರ್ಕಾರ ಏಳನೇ ವೇತನ ಆಯೋಗವನ್ನು ರಚಿಸಿತ್ತು. ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡುವುದು ತಾರ್ಕಿಕವಾಗಿ ಸರಿಯಲ್ಲ ಎಂದು ಆಯೋಗದ ಸಹಯೋಗದಲ್ಲಿರುವ ಹಲವಾರು ಸಂಸ್ಥೆಗಳು ಹೇಳಿರುವ ನಡುವೆ ಈ ವೇತನ ಏರಿಕೆ ಬೊಕ್ಕಸಕ್ಕೆ ಭಾರಿ ಹೊರೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com