ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಪತ್ರಕರ್ತರೊಬ್ಬರ ನಡುವಿನ ವಾಗ್ಯುದ್ಧ ಸೋಮವಾರ ಟ್ವಿಟ್ಟರ್ ಅನ್ನು ಕದನದ ಕಣವಾಗಿಸಿತು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಸೇರ್ಪಡೆಗೆ 5000 ಹೆಸರುಗಳನ್ನು ಸಚಿವೆ ಶಿಫಾರಸು ಮಾಡಿದ್ದಾರೆ ಎಂದು ಎಕಾನಮಿಕ್ ಟೈಮ್ಸ್ ಮಾಡಿದ್ದ ವರದಿಯ ಕುರಿತು ಅನುಭೂತಿ ವಿಷ್ಣು ಎಂಬವರು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಚಿವೆ, ನಿಮ್ಮ ಮಾಹಿತಿ ಮೂಲ ದುರುದ್ದೇಶದಿಂದ ಕೂಡಿದೆ ಎಂದು ಟ್ವೀಟಿಸಿದರು.
ಸಾಕಷ್ಟು ಮನವಿಯ ಬಳಿಕವೂ ನಿಮ್ಮ ಸಚಿವಾಲಯದಿಂದ ಇದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ ಎಂದು ಪತ್ರಕರ್ತ ಉತ್ತರಿಸಿದರು. ಈ ವಾಗ್ಯುದ್ಧಕ್ಕೆ ಇನ್ನಷ್ಟು ಮಂದಿ ಸೇರಿಕೊಂಡು, ನಿಮ್ಮ ಅನುಮತಿ ಬೇಕಿಲ್ಲ ಎಂದು ಸ್ಮೃತಿ ಹೇಳುವವರೆಗೂ ಇದು ಮುಂದುವರಿಯಿತು.