ಅಮಿರ್ ಖಾನ್ (ಸಂಗ್ರಹ ಚಿತ್ರ)
ದೇಶ
ಮರೆಯದಿರಿ 'ಪಿಕೆ' ಬ್ಲಾಕ್ ಬಸ್ಟರ್ ಆಗುವಂತೆ ಮಾಡಿತ್ತು ಭಾರತ: ಸತೀಶ್ ಗೌತಮ್
'ಪಿಕೆ' ಚಿತ್ರ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿತು ಭಾರತ. ಸಹಿಷ್ಣುತೆ ಎಂದರೆ ಇದು. ಇದನ್ನು ಅಮಿರ್ ಖಾನ್ ಯಾವಾಗಲೂ ನೆನಪಿಸಿಕೊಳ್ಳಬೇಕೆಂದು ಬಿಜೆಪಿ ಶಾಸಕ ಸತೀಶ್ ಗೌತಮ್ ಬುಧವಾರ ಹೇಳಿದ್ದಾರೆ...
ನವದೆಹಲಿ: 'ಪಿಕೆ' ಚಿತ್ರ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿತು ಭಾರತ. ಸಹಿಷ್ಣುತೆ ಎಂದರೆ ಇದು. ಇದನ್ನು ಅಮಿರ್ ಖಾನ್ ಯಾವಾಗಲೂ ನೆನಪಿಸಿಕೊಳ್ಳಬೇಕೆಂದು ಬಿಜೆಪಿ ಶಾಸಕ ಸತೀಶ್ ಗೌತಮ್ ಬುಧವಾರ ಹೇಳಿದ್ದಾರೆ.
ನಟ ಅಮಿರ್ ಅಸಹಿಷ್ಣುತೆ ಕುರಿತಂತೆ ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಿಕೆ ಚಿತ್ರದಲ್ಲಿ ಹಿಂದೂ ದೇವತೆಗಳನ್ನ ಅವಹೇಳನ ಮಾಡಲಾಗಿತ್ತು. ಆದರೂ ಜನರು ಚಿತ್ರವನ್ನು ನೋಡಿದ್ದರು. ನೋಡಿದ್ದೇ ಆಲ್ಲ ಚಿತ್ರ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿದ್ದರು. ಇದೊಂದೇ ಸಾಕು ಭಾರತದಲ್ಲಿ ಸಹಿಷ್ಣುತೆ ಎಂದು ಹೇಳಲು. ಭಾರತದಲ್ಲಿರುವ ಪ್ರತಿಯೊಬ್ಬರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.
ಇದೇ ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿರುವ ಅವರು, ಮುಂದಿನ ಅಧಿವೇಶನ ಸಂದರ್ಭದಲ್ಲಿ ದೇಶವನ್ನು ಅಗೌರವದಿಂದ ಕಾಣುವ ಅಮಿರ್ ಖಾನ್ ರಂತಹ ಜನರನ್ನು ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಬಿಡಬಾರದು ಎಂದು ಹೇಳಿದ್ದಾರೆ.


