
ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇಲ್ಲ. ಸಹಿಷ್ಣುತೆ ಇದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ವಿವಾದ ಅಸಹಿಷ್ಣುತೆ ವಿವಾದ ಲೋಕಸಭೆಯಲ್ಲಿ ಚರ್ಚೆಯಾಗುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು, ಅಸಹಿಷ್ಣುತೆ ಕುರಿತ ಚರ್ಚೆಗೆ ಕೇಂದ್ರ ಸರ್ಕಾರ ತಯಾರಾಗಿದೆ. ಆದರೆ ಸರ್ಕಾರ ಈ ಬಗ್ಗೆ ಸಮರ್ಥನೆ ನೀಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕಿದ್ದು, ಕಲಾಪ ಸುಗಮವಾಗಿ ನಡೆಸಲು ವಿಪಕ್ಷಗಳು ಸಂಯಮ ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ನರೇಂದ್ರ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಅಸಹಿಷ್ಣುತೆ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಈಗಲೇ ದೇಶದಲ್ಲಿ ಸಹಿಷ್ಣುತೆ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಿಎಸ್ ಟಿ ಮಸೂದೆ ಕುರಿತಂತೆ ಮಾತನಾಡಿರುವ ಅವರು, ಸರಕು ಮತ್ತು ಸೇವಾ ತೆರಿಗೆ ಮಸೂದೆಯು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ಬರಲಿದೆ. ಜಿಎಸ್ ಟಿ ಮಸೂದೆಗೆ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಆದರೆ, ರಾಜ್ಯಸಭೆಯಸಲ್ಲಿರುವ ವಿರೋಧಗಳು ಮಸೂದೆಯನ್ನು ಆಯ್ಕೆ ಸಮಿತಿಗೆ ಶಿಪಾರಸ್ಸು ಮಾಡಿದೆ. ಇದೀಗ ಆಯ್ಕೆ ಸಮಿತಿ ಕೂಡ ಮಸೂದೆಗೆ ಅಂಗೀಕಾರ ನೀಡಿದ್ದು, ಮಸೂದೆ ಕುರಿತಂತೆ ಆಯ್ಕೆ ಸಮಿತಿ ಈಗಾಗಲೇ ಅಧ್ಯಯನ ನಡೆಸಿದ್ದು, ಈ ಬಗೆಗಿನ ವಿವರಣೆಯನ್ನು ರಾಜ್ಯಸಭೆಗೆ ಶಿಫಾರಸ್ಸು ಮಾಡಿದೆ ಎಂದು ಹೇಳಿದ್ದಾರೆ.
Advertisement