ಯುಪಿಎಸ್ಸಿ: 15 ಸಾವಿರ ಮಂದಿ ಪಾಸು

ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ದೇಶಾದ್ಯಂತ ಆ.23ರಂದು ಪರೀಕ್ಷೆ ಬರೆದಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ದೇಶಾದ್ಯಂತ ಆ.23ರಂದು ಪರೀಕ್ಷೆ ಬರೆದಿದ್ದ 4.3 ಲಕ್ಷ ಮಂದಿಯಲ್ಲಿ 15 ಸಾವಿರ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಮುಖ್ಯ ಪರೀಕ್ಷೆ ಡಿ.18ರಂದು ನಡೆಯಲಿದ್ದು, ಇದಕ್ಕಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಆನ್ ಲೈನ್‍ನಲ್ಲಿರುವ ವಿಸ್ತೃತ ಅರ್ಜಿಯನ್ನು ತುಂಬಿಸಿ ಕಳುಹಿಸಿಕೊಡಬೇಕಿದೆ ಎಂದು ಯುಪಿಎಸ್‍ಸಿ ಹೇಳಿದೆ. 
ನಾಗರಿಕ ಸೇವಾ ಪರೀಕ್ಷೆಯು ಮೂರು ಹಂತದಲ್ಲಿ ನಡೆಯಲಿದ್ದು, ಅವುಗಳಲ್ಲಿ ಮೊದಲ ಹಂತ ಪ್ರಿಲಿಮಿನರಿ ಪರೀಕ್ಷೆಯಾಗಿದ್ದರೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಕೊನೆಯದಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com