

ಮುಂಬೈ: ದಿನಾ ಪುಸ್ತಕಗಳ ಮೂಟೆ ಹೊತ್ತು ಬೇಸತ್ತ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರ ಇಂದು ರಿಲೀಫ್ ನೀಡಿದೆ. ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಾಲಂ ಅವರ 84ನೇ ಜನ್ಮ ದಿನವನ್ನು ಮಹಾ ಸರ್ಕಾರ 'ನೋ ಬ್ಯಾಗ್ಸ್ ಡೇ'ಯೊಂದಿಗೆ ಆಚರಿಸುತ್ತಿದೆ.
ಇಂದು ಶಾಲೆಯಲ್ಲಿ ಪಠ್ಯೇತರ ಪುಸ್ತಕಗಳನ್ನು ಓದುವಂತೆ ಹಾಗೂ ಪಠ್ಯಪುಸ್ತಕಗಳ ಬ್ಯಾಗ್‌ನ್ನು ಮನೆಯಲ್ಲೇ ಬಿಟ್ಟು ಬರುವಂತೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ಮಕ್ಕಳಿಗೆ ಸೂಚಿಸಿದೆ.
ಜುಲೈಯಲ್ಲಿ ಕಲಾಂ ಅವರು ನಿಧನರಾದ ನಂತರ ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತವ್ಡೆ ಅವರು ಮಾಜಿ ರಾಷ್ಟ್ರಪತಿಯ ಜನ್ಮದಿನವನ್ನು 'ರೀಡಿಂಗ್ ಡೇ'ಯಾಗಿ ಆಚರಿಸಲು ನಿರ್ಧರಿಸಿದ್ದರು.