೨ನೇ ಹಂತದಲ್ಲಿ ಶೇ.೫೫ ಮತದಾನ

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪೂರ್ಣವಾಗಿದ್ದು, ಶೇ.೫೫ ಮತದಾನವಾಗಿರುವುದಾಗಿ ವರದಿಯಾಗಿದೆ...
ಬಿಹಾರ ಚುನಾವಣೆ (ಸಂಗ್ರಹ ಚಿತ್ರ)
ಬಿಹಾರ ಚುನಾವಣೆ (ಸಂಗ್ರಹ ಚಿತ್ರ)

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪೂರ್ಣವಾಗಿದ್ದು, ಶೇ.೫೫ ಮತದಾನವಾಗಿರುವುದಾಗಿ ವರದಿಯಾಗಿದೆ.

ಅತ್ಯಂತ ಸೂಕ್ಷ್ಮ ಮತ್ತು ಕಠಿಣ ಎಂದೇ ಗುರುತಿಸಲ್ಪಟ್ಟಿದ್ದ ಈ ಹಂತದಲ್ಲಿ ಅರ್ಧಕ್ಕಿಂತ ಹೆಚ್ಚು ಮತಚಲಾವಣೆಯಾಗಿರುವುದು ಹಾಗೂ ಶಾಂತಿಯುತವಾಗಿ ಪೂರ್ಣಗೊಂಡಿರುವುದು ಅಚ್ಚರಿಗೆ   ಕಾರಣವಾಗಿದೆ. ನಕ್ಸಲ ಪ್ರದೇಶಗಳೆಂದೇ ಗುರುತಿಸಲ್ಪಟ್ಟಿರುವ ಜಿಗಳಾದ ಕೈಮುರ್, ರೋಹ್ಟಸ್, ಅರ್ವಲ, ಜೆಹಾನಾಬಾದ್, ಔರಂಗಾಬಾದ್ ಮತ್ತು ಗಯಾಗಳಲ್ಲಿ ಚುನಾವಣಾಪ್ರಕ್ರಿಯೆ  ಸುಸೂತ್ರವಾಗಿ ನಡೆಯುವಂತೆ ನಿಭಾಯಿಸುವುದು ಭದ್ರತಾ ಸಿಬ್ಬಂದಿಗಳಿಗೆ ಭಾರಿ ಸವಾಲೇ ಆಗಿತ್ತು.

ಮೊದಲ ಹಂತದಂತೆ ಈ ಬಾರಿಯೂ ಮಹಿಳಾ ಮತದಾರರೇ ಪ್ರಾಬಲ್ಯ ಮೆರೆದಿದ್ದು, ಮತಗಟ್ಟೆಯ ಬಳಿ ಮಹಿಳೆಯರೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ೨೦೧೦ರ ಚುನಾವಣೆಗೆ ಹೋಲಿಸಿದಲ್ಲಿ ಈ  ಬಾರಿ ಮತದಾನದಲ್ಲಿ ಶೇ.೩ರಷ್ಟು ಏರಿಕೆ ಕಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅಜಯ್ ವಿ ನಾಯಕ್ ತಿಳಿಸಿದ್ದಾರೆ. ೫೭.೫ರಷ್ಟು ಮಹಿಳೆಯರಿಂದ ಮತದಾನವಾಗಿದ್ದರೆ, ಪುರುಷರಿಂದ  ಕೇವಲ ಶೇ೫೨.೫ರಷ್ಟು ವೋಟಿಂಗ್ ಆಗಿದೆ. ಕೈಮುರ್ ನಲ್ಲಿ ಗರಿಷ್ಟ ಶೇ೫೭.೮೬ ಮತದಾನವಾಗಿದೆ. ಗಯಾ ಜಿಯ ೨ ಮತಗಟ್ಟೆ ಹೊರತುಪಡಿಸಿ ಮಿಕ್ಕೆಲ್ಲ ಕಡೆ ಶಾಂತಿಯುತ ಮತದಾನ ನಡೆದಿದೆ. ಗಯಾದಲ್ಲಿ ೧೨ಕೆಜಿ ಮತ್ತು ೧೦ಕೆಜಿ ತೂಕದ ಬಾಂಬ್‌ಗಳನ್ನು ವಶ ಪಡಿಸಿಕೊಂಡು ಸಿಆರ್‌ಪಿಎ- ನಿಷ್ಕ್ರಿಯಗೊಳಿಸಿದೆ.

ಮಾಜಿ ಸಚಿವ ಬಿಜೆಪಿ ನಾಯಕ ಪ್ರೇಮಕುಮಾರ್, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ನಾರಾಯಣ ಸಿಂಗ್, ರಾಜ್ಯ ಸಚಿವ ಜಯಕುಮಾರ್ ಸಿಂಗ್ ಮುಂತಾದ ಪ್ರಮುಖರ ಹಣೆಬರಹ ಈ ಸುತ್ತಿನಲ್ಲಿ  ನಿರ್ಧಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com