ಭಾರತ-ಆಫ್ರಿಕಾ ಸ್ನೇಹ ಗುಲಾಬಿ ಉದ್ಯಾನವನವನ್ನು ಉದ್ಘಾಟಿಸಿದ ಸುಷ್ಮಾ ಸ್ವರಾಜ್

ಭಾರತ-ಆಫ್ರಿಕಾ ಗುಲಾಬಿ ಉದ್ಯಾನವನವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉದ್ಘಾಟಿಸಿದರು. ನಂತರ...
ಭಾರತ-ಆಫ್ರಿಕಾ ಸ್ನೇಹ ಗುಲಾಬಿ ಉದ್ಯಾನವನ ಉದ್ಘಾಟಿಸಿದ ಸಚಿವೆ ಸುಷ್ಮಾ ಸ್ವರಾಜ್
ಭಾರತ-ಆಫ್ರಿಕಾ ಸ್ನೇಹ ಗುಲಾಬಿ ಉದ್ಯಾನವನ ಉದ್ಘಾಟಿಸಿದ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ: ಭಾರತ-ಆಫ್ರಿಕಾ ಗುಲಾಬಿ ಸ್ನೇಹ ಉದ್ಯಾನವನವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉದ್ಘಾಟಿಸಿದರು.ನಂತರ ಮಾತನಾಡಿದ ಸಚಿವೆ ಸುಷ್ಮಾ ಸ್ವರಾಜ್, ಇಂದು ಬಹಳ ವಿಭಿನ್ನವಾದ ಮತ್ತು ವಿಶಿಷ್ಟವಾದ ದಿನ. ಇಲ್ಲಿ ಸೇರಿರುವ ಜನರ ಜೊತೆ ಅನೌಪಚಾರಿಕವಾಗಿ ಮಾತನಾಡುತ್ತಿರುವುದು ಖುಷಿ ನೀಡುತ್ತಿದೆ. ಹೂವು ಪ್ರೀತಿ, ಸ್ನೇಹ ಮತ್ತು ಸಹೋದರತ್ವವನ್ನು ಅರ್ಥವನ್ನು ಸಾರುತ್ತದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ಸ್ನೇಹ-ಸೌಹಾರ್ದತೆಯನ್ನು ಸಾರಲು ಈ ಗುಲಾಬಿ ಉದ್ಯಾನವನ ಗುರುತು ಆಗಿದ್ದು, ನಮ್ಮ ಸ್ನೇಹ ಹೂವಿನಂತೆ ಅರಳಬೇಕು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಶೃಂಗಸಭೆಯಲ್ಲಿ 54 ಆಫ್ರಿಕಾ ದೇಶಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಸಭೆಗೆ ಸೂಕ್ತ ಭದ್ರತೆಗಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಆಹಾರ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ವಿಷಯಗಳಲ್ಲಿ ಆಫ್ರಿಕಾ ದೇಶಗಳು ಎದುರಿಸುತ್ತಿರುವ ಸವಾಲುಗಳು, ಭಾರತ ಮತ್ತು ಆಫ್ರಿಕಾ ದೇಶಗಳ ಮಧ್ಯೆ ವ್ಯಾಪಾರ ಮತ್ತು ಹೂಡಿಕೆ ವೃದ್ಧಿ ಕುರಿತು, ಭದ್ರತಾ ಸಹಕಾರ, ನೌಕಾಪಡೆ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹಿಸಲು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com