ಗೀತಾ ಪೋಷಣೆ: ಈಧಿ ಫೌಂಡೇಶನ್ ಗೆ 1 ಕೋಟಿ ಘೋಷಣೆ ಮಾಡಿದ ಮೋದಿ

ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದ ಭಾರತೀಯ ಮೂಲದ ಗೀತಾಳ ಪಾಲನೆ ಹಾಗೂ ಪೋಷಣೆ ಮಾಡಿದ್ದ ಪಾಕಿಸ್ತಾನದ ಈಧಿ ಫೌಂಡೇಶನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ 1 ಕೋಟಿ ರುಪಾಯಿಯನ್ನು ಘೋಷಣೆ ಮಾಡಿದ್ದಾರೆ...
ಹಲವು ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಗೀತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಲ್ಕೀಸ್ ಈಧಿಯವರೊಂದಿಗಿರುವ ಚಿತ್ರ.
ಹಲವು ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಗೀತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಲ್ಕೀಸ್ ಈಧಿಯವರೊಂದಿಗಿರುವ ಚಿತ್ರ.

ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದ ಭಾರತೀಯ ಮೂಲದ ಗೀತಾಳ ಪಾಲನೆ ಹಾಗೂ ಪೋಷಣೆ ಮಾಡಿದ್ದ ಪಾಕಿಸ್ತಾನದ ಈಧಿ ಫೌಂಡೇಶನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ 1 ಕೋಟಿ ರುಪಾಯಿಯನ್ನು ಘೋಷಣೆ ಮಾಡಿದ್ದಾರೆ.

 ಕಿವಿ ಕೇಳದ ಮತ್ತು ಮಾತು ಬಾರದ ಭಾರತೀಯ ಮೂಲದ ಗೀತಾ ಹಲವು ವರ್ಷಗಳ ಬಳಿಕ ಭಾರತಕ್ಕೆ ನಿನ್ನೆಯಷ್ಟೇ ಸೇರಿದ್ದಳು. ಗೀತಾ ಭಾರತಕ್ಕೆ ಬರುತ್ತಿದ್ದಂತೆ ಆಕೆಯನ್ನು ಸ್ವಾಗತ ಮಾಡಿದ್ದ ಮೋದಿ ಅವರು, ಆಕೆಯನ್ನು ಇಷ್ಟು ವರ್ಷ ಪೋಷಣೆ ಮಾಡಿದ್ದ ಈಧಿ ಕುಟುಂಬಕ್ಕೆ ವಂದನೆ ಅರ್ಪಿಸಿದ್ದರು. ಈ ವೇಳೆ ಈಧಿ ಫೌಂಡೇಶನ್ ನನ್ನು ಕೊಂಡಾಡಿದ ಅವರು, ಈಧಿ ಕುಟುಂಬವು ದಯೆ ಮತ್ತು ಸಹಾನುಭೂತಿಯ ದೇವದೂತರು. ಸಂಸ್ಥೆಯ ಕಾರ್ಯವನ್ನು ಎಷ್ಟು ಬಾರಿ ಹೇಳಿದರೂ ಅದು ಕಡಿಮೆಯೇ. ಸಂಸ್ಥೆಗೆ ಏನು ನೀಡಿದರೂ ಏನೂ ಹೇಳಿದರೂ ಅದು ಕಡಿಮೆ ಸಂಸ್ಥೆಗೆ ಸಹಾಯಕವಾಗಿ ರು.1 ಕೋಟಿ ನೀಡಲು ಇದೀಗ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಈಧಿ ಫೌಂಡೇಶನ್ ಒಂದು ಪಾಕಿಸ್ತಾನದ ಲಾಭರಹಿತ ಸಮಾಜ ಕಲ್ಯಾಣ ಸಂಸ್ಥೆಯಾಗಿದ್ದು, 1951ರಲ್ಲಿ ಅಬ್ದುಲ್ ಸತ್ತರ್ ಈಧಿ ಎಂಬುವವರು ನಿರ್ಮಿಸಿದ್ದರು. ಪಾಕಿಸ್ತಾನದಲ್ಲಿ ಈಗಲೂ ಅಬ್ದುಲ್ ಸತ್ತರ್ ಈಧಿಯನ್ನು ತೆರೆಸಾ ತಂದೆ ಎಂದೇ ಹೇಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com