
ಪಾಟ್ನ: ಮೋದಿಯವರ ಒಡಕುಂಟು ಮಾಡುವ ಭಾಷೆಯಿಂದಾಗಿ ಎಲ್ಲಿ ಅವರು ಭಾರತವನ್ನು ಕಳೆದುಕೊಳ್ಳುತ್ತಾರೋ ಎಂದು ಭಯವಾಗುತ್ತಿದೆ ಎಂದು ನಿತೀಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಮೋದಿಯವರ ಮೀಸಲಾತಿ ಹೇಳಿಕೆ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮೋದಿಯವರು ಬಿಹಾರ ಚುನಾವಣೆಯಲ್ಲಿ ಎಲ್ಲಿ ಸೋಲು ಅನುಭವಿಸುತ್ತೇವೆಯೋ ಎಂಬ ಹತಾಶೆಯಲ್ಲಿದ್ದಾರೆ. ಅವರ ಒಡಕು ಭಾಷೆಯಿಂದಾಗಿ ಎಲ್ಲಿ ಭಾರತವನ್ನು ಕಳೆದುಕೊಳ್ಳುತ್ತಾರೋ ಎಂದು ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಪ್ರಯುಕ್ತ ಇಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿತೀಶ್ ಕುಮಾರ್ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದರು.
Advertisement