ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಆರ್'ಎಸ್ಎಸ್ ಅಸಮಾಧಾನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕಾರಿಣಿ ಸಭೆ ಹೆಚ್ಚುತ್ತಿರುವ ಮುಸ್ಲಿಂ ಜನ ಸಂಖ್ಯೆಯ ಬಗೆಗೆ ಶನಿವಾರ ಅಸಮಾಧಾನ ವ್ಯಕ್ತಪಡಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕಾರಿಣಿ ಸಭೆ ಹೆಚ್ಚುತ್ತಿರುವ ಮುಸ್ಲಿಂ ಜನ ಸಂಖ್ಯೆಯ ಬಗೆಗೆ ಶನಿವಾರ ಅಸಮಾಧಾನ ವ್ಯಕ್ತಪಡಿಸಿದೆ.

ಒಂದೊಮ್ಮೆ ಹಿಂದೂ ಪ್ರಾಬಲ್ಯವಿದ್ದ ಪ್ರದೇಶಗಳು ಈಗ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಾಗಿ ಬದಲಾಗಿವೆ ಎಂದಿರುವ ಆರೆಸ್ಸೆಸ್, ದೇಶದ ಜನಸಂಖ್ಯಾ ನೀತಿಯಲ್ಲಿ ಬದಲಾವಣೆಯನ್ನು ಕೋರಿ ನಿರ್ಣಯ ಮಂಡಿಸಿದೆ. ಭಾರತದಲ್ಲಿರುವ ಪ್ರತೀ ಸಮುದಾಯ ವಿಭಿನ್ನ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ದೇಶದ ಪ್ರಾದೇಶಿಕ ಜನಸಂಖ್ಯಾ ವ್ಯವಸ್ಥೆಯಲ್ಲಿ ಅಸಮತೋಲನ ಉಂಟು ಮಾಡಿದೆ.

ಗಡಿ ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆ ಮಿತಿಮೀರಿದೆ. ದೇಶದ ಎಂಟು ಜಿಲ್ಲೆಗಳಲ್ಲಿ ಮುಸ್ಲಿಮರೇ ಅ„ಕ ಸಂಖ್ಯೆಯಲ್ಲಿದ್ದಾರೆ. ಒಂದೊಮ್ಮೆ ಹಿಂದೂಗಳು ಅಧಿಕವಾಗಿದ್ದ ಪ್ರದೇಶಗಳಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದ್ದು ಹೇಗೆ? ಇದರಿಂದಾಗಿ ಅಲ್ಲಿನ ಸಾಂಸ್ಕೃತಿಕ ವೈವಿಧ್ಯತೆ ನಾಶವಾಗಿದೆ. ನಮ್ಮ ಜನಸಂಖ್ಯಾ ನೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಕೃಷ್ಣಗೋಪಾಲ್ ಹೇಳಿದ್ದಾರೆ. ಇತ್ತೀಚಿನ ಜನಗಣತಿಯ ಪ್ರಕಾರ 2001- 2011ರ ದಶಕದಲ್ಲಿ ಮುಸ್ಲಿಂ ಸಮುದಾಯ ಶೇ.0.8 ಬೆಳವಣಿಗೆ ದಾಖಲಿಸಿದೆ. ಹಿಂದೂಗಳ ಸಂಖ್ಯೆಯಲ್ಲಿ ಶೇ.0.7 ಮಾತ್ರ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com