ಆದಾಯ ತೆರಿಗೆ ವಿವರ ಸಲ್ಲಿಸಲು ಸೆ.7 ಕೊನೆಯ ದಿನಾಂಕ

ವರಮಾನ ತೆರಿಗೆ ವಿವರ ಸಲ್ಲಿಸಲು ವಿಧಿಸಿದ್ದ ಗಡುವನ್ನು ಕೇಂದ್ರ ಸರ್ಕಾರ ಸೆ.7 ವರೆಗೆ ವಿಸ್ತರಿಸಿದೆ.
ಆದಾಯ ತೆರಿಗೆ ವಿವರ ಸಲ್ಲಿಸಲು ಸೆ.7 ಕೊನೆಯ ದಿನಾಂಕ
ಆದಾಯ ತೆರಿಗೆ ವಿವರ ಸಲ್ಲಿಸಲು ಸೆ.7 ಕೊನೆಯ ದಿನಾಂಕ

ನವದೆಹಲಿ: ವರಮಾನ ತೆರಿಗೆ ವಿವರ ಸಲ್ಲಿಸಲು ವಿಧಿಸಿದ್ದ ಗಡುವನ್ನು ಕೇಂದ್ರ ಸರ್ಕಾರ  ಸೆ.7 ವರೆಗೆ ವಿಸ್ತರಿಸಿದೆ.

ಗಡುವು ವಿಸ್ತರಿಸಿರುವ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಟ್ವಿಟರ್ ನಲ್ಲಿ ಮಾಹಿತಿ ನೀಡಿ ಈ ಹಿಂದೆ ಆಗಸ್ಟ್ 31 ರ ವರೆಗೆ ಇದ್ದ ಡೆಡ್ ಲೈನ್ ನನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೀಸಲಾತಿ ಪ್ರತಿಭಟನೆಯಿಂದ  ಸಾರ್ವಜನಿಕ ಜೀವನ ಅಸ್ತವ್ಯಸ್ಥಗೊಂಡ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿರುವ ನಾಗರಿಕರಿಗೆ ಐಟಿ ತೆರಿಗೆ ಪಾವತಿಸುವುದಕ್ಕೆ ವಿಧಿಸಲಾಗಿದ್ದ ಗಡುವನ್ನು ಸೆ.7 ವರೆಗೆ ವಿಸ್ತರಿಸಲಾಗಿತ್ತು. ಈಗ ಇದೇ ಆದೇಶ ದೇಶಾದ್ಯಂತ ಇರುವ ನಾಗರಿಕರಿಗೆ ಅನ್ವಯವಾಗಲಿದೆ. ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ 7 .98 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com